ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರ ವಿರುದ್ಧ  ಕೇವಲ 90 ಮತಗಳನ್ನು ಪಡೆದು ಹೀನಾಯವಾಗಿ ಸೋಲು ಅನುಭವಿಸಿದ್ದರು. ತದನಂತರ ರಾಜಕಾರಣವನ್ನು ತ್ಯಜಿಸಿ ಕೌಟಿನ್ಹಾ(55) ಅವರನ್ನು ವಿವಾಹವಾಗುವುದಾಗಿ ತಿಳಿಸಿದ್ದರು.

ಕೊಡೈಕೆನಾಲ್(ಆ.17): ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ತಮ್ಮ ಬಹುದಿನದ ಗೆಳೆಯ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕೌಟಿನ್ಹಾ(55) ಅವರನ್ನು ತಮಿಳುನಾಡಿನ ಕೊಡೈಕೆನಾಲ್'ನಲ್ಲಿ  ಕೆಲವೇ ಕೆಲವು ಗೆಳೆಯರ ಸಮ್ಮುಖದಲ್ಲಿ ಇಂದು ವಿವಾಹವಾದರು.

ನೋಂದಣಿ ಕಚೇರಿಯಲ್ಲಿ ಇಬ್ಬರು ಅಧಿಕೇತ ದಾಖಲೆಗಳಿಗೆ ಸಹಿ ಹಾಕುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಮಾರಂಭದಲ್ಲಿ ವಧು ಅಥವಾ ವರನ ಕಡೆಯ ಬಂಧುಗಳ್ಯಾರು ಹಾಜರಿರಲಿಲ್ಲ. ವಿವಾಹಕ್ಕೆ ಸಂಬಂಧಿಸಿದ ಕಾನೂನುಬದ್ಧ ದಾಖಲೆಗಳನ್ನು ಪೂರೈಸುವ ಸಲುವಾಗಿ ದಂಪತಿಗಳು ಕಳೆದ ಎರಡು ತಿಂಗಳಿಂದ ಕೊಡೈಕೆನಾಲ್'ನಲ್ಲಿ ನೆಲೆಸಿದ್ದರು.

45 ವರ್ಷದ ಶರ್ಮಿಳಾ ಅವರು 16 ವರ್ಷಗಳ ಸುಧೀರ್ಘ ಉಪವಾಸದ ನಂತರ 2016ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ  ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರ ವಿರುದ್ಧ  ಕೇವಲ 90 ಮತಗಳನ್ನು ಪಡೆದು ಹೀನಾಯವಾಗಿ ಸೋಲು ಅನುಭವಿಸಿದ್ದರು. ತದನಂತರ ರಾಜಕಾರಣವನ್ನು ತ್ಯಜಿಸಿ ಕೌಟಿನ್ಹಾ(55) ಅವರನ್ನು ವಿವಾಹವಾಗುವುದಾಗಿ ತಿಳಿಸಿದ್ದರು.

28ನೇ ವರ್ಷಕ್ಕೆ ಹೋರಾಟಕ್ಕೆ

2000ರಲ್ಲಿ ತಮ್ಮ 28ನೇ ವಯಸ್ಸಿನಲ್ಲಿ ಮಣಿಪುರ ರಾಜ್ಯಕ್ಕೆ ಸಂಬಂಧಿಸಿದಂತೆ ನಾಗರಿಕರ ಮೇಲೆ ದುರ್ಬಳಕೆಯಾಗುತ್ತಿರುವ ಸಶಸ್ತ್ರದಳದ ವಿಶೇಷಾಧಿಕಾರ ಕಾನೂನನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ಆಜೀವಪರ್ಯಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಉಕ್ಕಿನ ಮಹಿಳೆ ಎಂದು ಪ್ರಸಿದ್ಧಿಯಾಗಿದ್ದರು.