ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ, ಎಂಎಲ್’ಸಿ ರವೀಂದ್ರನಾಥ್, ಶಿವಯೋಗಿ ಸ್ವಾಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಮಾಜಿ MLC ಆನಂದ ಅಪ್ಪುಗೋಳ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ತುಮಕೂರು (ಜ.18): ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ದಿನಗಳೆದಂತೆ ಹೆಚ್ಚಾಗುತ್ತಿದೆ. ಈ ಮಧ್ಯೆ ಈಶ್ವರಪ್ಪ ಬೆಂಬಲಿಗರ ಸಭೆ ನಡೆಯಿತು.

ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಭಾರತಮಾತಾ ಕಾರ್ಯಕ್ರಮ ಹಮ್ಮಿಕೊಳಲಾಗಿದ್ದು, ಅಲ್ಲೇ ಅತೃಪ್ತ ನಾಯಕರ ಸಭೆ ಕೂಡಾ ನಡೆಯಿತು.

ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ, ಎಂಎಲ್’ಸಿ ರವೀಂದ್ರನಾಥ್, ಶಿವಯೋಗಿ ಸ್ವಾಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಮಾಜಿ MLC ಆನಂದ ಅಪ್ಪುಗೋಳ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಹಿರಿಯ ನಾಯಕರನ್ನು ಬಿಎಸ್’​ವೈ ಕಡೆಗಣಿಸಿದ್ದಾರೆ, ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ.

ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ನನಗೆ ಆಹ್ವಾನವಿಲ್ಲ, ನಾನು ಹೋಗುವುದಿಲ್ಲ, ಎಂದು ಸಭೆ ಬಳಿಕ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಹೇಳಿದ್ದಾರೆ