ಆ್ಯಪ್ ಆಧಾರಿತ ಟ್ಯಾಕ್ಸಿ ಓಲಾ – ಉಬರ್ ವಿಲೀನ

First Published 29, Mar 2018, 8:49 AM IST
Ride Hailing Rivals Uber and Ola on Merger Path in India
Highlights

ಭಾರತದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ದೇಶೀಯ ಸಂಸ್ಥೆ ಓಲಾ ಮತ್ತು ವಿದೇಶದ ಉಬರ್ ಕಂಪನಿ ನಡುವೆ ಭಾರೀ ಪೈಪೋಟಿ ಇರುವುದು ತಿಳಿದ ವಿಚಾರವೇ. ಆದರೆ, ಇದೀಗ ಈ ಎರಡೂ ಸಂಸ್ಥೆಗಳು ಒಟ್ಟುಗೂಡಲಿವೆ.

ನವದೆಹಲಿ: ಭಾರತದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ದೇಶೀಯ ಸಂಸ್ಥೆ ಓಲಾ ಮತ್ತು ವಿದೇಶದ ಉಬರ್ ಕಂಪನಿ ನಡುವೆ ಭಾರೀ ಪೈಪೋಟಿ ಇರುವುದು ತಿಳಿದ ವಿಚಾರವೇ. ಆದರೆ, ಇದೀಗ ಈ ಎರಡೂ ಸಂಸ್ಥೆಗಳು ಒಟ್ಟುಗೂಡಲಿವೆ.

ಈ ಸಂಸ್ಥೆಗಳ ನಡುವೆ ಜಪಾನ್ ಮೂಲದ ಹೂಡಿಕೆ ಬ್ಯಾಂಕ್ ಆದ ಸಾಫ್ಟ್‌ಬ್ಯಾಂಕ್ ಮಧ್ಯಸ್ಥಿಕೆ ವಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎರಡೂ ಸಂಸ್ಥೆಗಳ ವಿಲೀನಕ್ಕೆ 1 ವರ್ಷದಿಂದ ನಡೆಯುತ್ತಿ ರುವ ಸಮಾಲೋಚನೆ, ಕಳೆದ ವಾರದಿಂದ ಚುರುಕು ಪಡೆದುಕೊಂಡಿದೆ.

ಈಗಾಗಲೇ ಚೀನಾ, ರಷ್ಯಾದ ತನ್ನ ಘಟಕಗಳನ್ನು ಉಬರ್ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಿದೆ.

loader