ರಾಂಚಿ(ಜು.16): ಇಸ್ಲಾಂ ಮತ್ತು ಖುರಾನ್ ಕುರಿತು ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಿಚಾ ಭಾರತಿಗೆ ಷರತ್ತು ಬದ್ಧ ಜಾಮೀನು ದೊರೆತಿದೆ.

ರಾಂಚಿಯ ರಿಚಾ ಭಾರತಿ ತಮ್ಮ ಫೇಸ್’ಬುಕ್’ನಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಪೊಸ್ಟ್ ಮಾಡಿದ್ದರು. ಇದರಿಂದ ಕೆರಳಿದ್ದ ಅಲ್ಪಸಂಖ್ಯಾತ ಸಮುದಾಯ ರಿಚಾ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಖುರಾನ್’ನ 5 ಪ್ರತಿಗಳನ್ನು ಹಂಚಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

ಆದರೆ ನ್ಯಾಯಾಲಯದ ಆದೇಶ ಧಿಕ್ಕರಿಸಿರುವ ರಿಚಾ, ಮುಸ್ಲಿಮರು ಎಂದಾದರೂ ಹನುಮಾನ್ ಚಾಲಿಸಾ ಓದುತ್ತಾರೆಯೇ? ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ಯಾವುದೇ ಕಾರಣಕ್ಕೂ ಖುರಾನ್ ಪ್ರತಿ ಹಂಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.