Asianet Suvarna News Asianet Suvarna News

ಇಂಗ್ಲೀಷ್'ನಲ್ಲಿ ಭಿಕ್ಷೆ ಬೇಡುವ ಇವರು ಶ್ರೀಮಂತ ಭಿಕ್ಷುಕಿಯರು

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್ ನ.28 ರಿಂದ 30 ವರೆಗೆ 3 ದಿವಸ ಭೇಟಿ ನೀಡುತ್ತಿದ್ದಾರೆ. ಆದರೆ ಇದರಿಂದ  ಭಿಕ್ಷುಕರಿಗೆ ತಲೆನೋವಾಗಿ ಪರಿಣಿಮಿಸಿದೆ ಅಂತಾನೇ ಹೇಳಬಹುದು. ಯಾಕಂದ್ರೆ ಟ್ರಂಪ್​ ಪುತ್ರಿ  ಬರುವ ವೇಳೆ ಯಾವ ಭಿಕ್ಷುಕರು ಕಾಣಿಸಬಾರದು ಎಂದು 1000ಕ್ಕೂ ಹೆಚ್ಚು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.

rich beggars found in Hyderabad

ಹೈದರಾಬಾದ್ (ನ.23):  ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್ ನ.28 ರಿಂದ 30 ವರೆಗೆ 3 ದಿವಸ ಭೇಟಿ ನೀಡುತ್ತಿದ್ದಾರೆ. ಆದರೆ ಇದರಿಂದ  ಭಿಕ್ಷುಕರಿಗೆ ತಲೆನೋವಾಗಿ ಪರಿಣಿಮಿಸಿದೆ ಅಂತಾನೇ ಹೇಳಬಹುದು. ಯಾಕಂದ್ರೆ ಟ್ರಂಪ್​ ಪುತ್ರಿ  ಬರುವ ವೇಳೆ ಯಾವ ಭಿಕ್ಷುಕರು ಕಾಣಿಸಬಾರದು ಎಂದು 1000ಕ್ಕೂ ಹೆಚ್ಚು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.

ಆದರೆ ಇನ್ನೂ ಭಿಕ್ಷೆ ಬೇಡುವುದು ನಿಷೇಧ, ಈ ಹಿನ್ನೆಲೆ ನಗರದ ಕೆಲವು ದರ್ಗಾ, ಮಸೀದಿ, ದೇವಾಲಯ ಸುತ್ತ ಇರುವ ಭಿಕ್ಷುಕರನ್ನು ಮರುವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ನೆಪ ಹೇಳಿದ್ದಾರೆ. ಇನ್ನೂ ಇಂತಹ ಸಂದಂರ್ಭದಲ್ಲಿ ಇಬ್ಬರು ‘ಶ್ರೀಮಂತ ಭಿಕ್ಷುಕಿ’ಯರ ಕೂತುಹಲಕಾರಿ ಕತೆಗಳು ಬೆಳಕಿಗೆ ಬಂದಿವೆ.ಇನ್ನೂ  ಇದೇ ವೇಳೆ ಭಿಕ್ಷುಕರನ್ನು ಅಧಿಕಾರಿಗಳು ವಿಚಾರಿಸಿಕೊಂಡು ಬಂದಾಗ ಇಬ್ಬರು ಇಂಗ್ಲೀಷ್​ ಮತಾನಾಡುವ ಭಿಕ್ಷುಕಿಯರು ಪತ್ತೆಯಾಗಿದ್ದಾರೆ. ಫರ್ಜೋನಾಳ ಮತ್ತು ರಬೀಯಾ ಬಶೀರಾ ಭಿಕ್ಷುಕಿಯರು.  ಫರ್ಜೋನಾಳ ಈಕೆ 50 ವರ್ಷದ ಫರ್ಜೋನಾ ಎಂಬಿಎ ಪಧವೀದರರು. ಲಂಡನ್​ನಲ್ಲಿ ಅಕೌಂಟರ್​ ಆಗಿದ್ದರು. ಮಗ ಅಮೇರಿಕಾದಲ್ಲಿದ್ದಾನೆ. ಅಮರ್ ಪೇಟ್​ದಲ್ಲಿ ಐಷರಾಮಿ ಅಪಾಟ್​ರ್ಮೆಂಟ್​ ಇದೆ. ಗಂಡ ತೀರಿ ಹೋದ ಬಳಿಕ ಕುಗ್ಗಿಹೋದ  ಫರ್ಜೋನಾಳಿಗೆ ದೇವಮಾನವನ ಸಲಹೇಯಂತೆ ಬಿಕ್ಷಾಟನೆ ಆರಂಭಿಸಿದಳು. 44 ವರ್ಷದ ರಬಿಯಾ ಬಶೀರಾಳ ಬವಣೆ ಏನು ಕಡಿಮೆ ಇಲ್ಲ. ಇಕೆ ಹೈದರಾಬಾದ್​ನ ನಿವಾಸಿಯಾದ ಈಕೆ ಇಲ್ಲಿ ಬಾರೀ ಆಸ್ತಿ ಹೊಂದಿದ್ದಾಳೆ. ಅಮೇರಿಕಾದ ಗ್ರೀನ್​ಕಾಡ್​ರ್ ಹೊಂದಿದ್ದಾಳೆ. ಸೋದರರು ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಹಿನ್ನೆಲೆ ಮನನೊಂದ ರಬಿಯಾ, ಬಂಧುಗಳ ಸಲಹೆ ಮೇರೆಗೆ ಮಾನಸಿಕ ನೆಮ್ಮದಿಗಾಗಿ ದರ್ಗಾದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಆದರೆ ಈಗ ಬಂಧುಗಳ ವಶಕ್ಕೆ ವಹಿಸಲಾಗಿದೆ.

Follow Us:
Download App:
  • android
  • ios