ನಗರದ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅಭಿವೃದ್ಧಿಪೃಡಿಸುವುದು ಬಿಡಿಎ ಕೆಲಸವಲ್ಲ. ನಗರ ಯೋಜನಾ ಸಮಿತಿಯ ಕೆಲಸ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು: ನಗರದ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅಭಿವೃದ್ಧಿಪೃಡಿಸುವುದು ಬಿಡಿಎ ಕೆಲಸವಲ್ಲ. ನಗರ ಯೋಜನಾ ಸಮಿತಿಯ ಕೆಲಸ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ರೂಪಿಸುವ ಮಾಸ್ಟರ್ ಪ್ಲ್ಯಾನ್ ಅನೇಕ ‘ಉಪಾಯ’ಗಳನ್ನು ಹೊಂದಿರುತ್ತದೆ. ಆದರೆ, ಅದರ ಮುಖ್ಯ ಉದ್ದೇಶ ಚುನಾವಣೆ ಸಮಯದಲ್ಲಿ ‘ಕೊಡುಗೆ’ಗಳನ್ನು ವಾಪಸ್ ಪಡೆಯುವ ಸಂಬಂಧ ಬಿಲ್ಡರ್‌ಗಳಿಗೆ ಭೂಬಳಕೆ ಬದಲಾವಣೆ ಮಾಡುವುದೇ

ಆಗಿರುತ್ತದೆ. ನಾಗರಿಕರ ಗಮನವನ್ನು ಕೇವಲ ಕಾಗದದ ಮೇಲೆಯೇ ಉಳಿಯುವಂಥ ‘ಉಪಾಯ’ಗಳ ಕಡೆಗೆ ಹರಿಸಿ ಬಿಲ್ಡರ್‌ಗಳು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಈ ಮಾಸ್ಟರ್ ಪ್ಲ್ಯಾನ್ ಬಳಕೆಯಾಗುವ ಆತಂಕ ನನ್ನನ್ನು ಕಾಡುತ್ತಿದೆ ಎಂದು ಅವರು ಟ್ವೀಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಯ ಮೊದಲು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮಾಸ್ಟರ್ ಪ್ಲ್ಯಾನ್‌ನ ಮೂಲಕ ಭೂ ಬಳಕೆ ನಿಯಮಗಳನ್ನು ಬದಲಾಯಿಸಲು ಮುಂದಾದರೆ ಬೆಂಗಳೂರಿನ ಜನರು ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಿಸಬಾರದು ಎಂದು ರಾಜೀವ್ ತೀಕ್ಷ್ಣವಾಗಿ ಹೇಳಿದ್ದಾರೆ