Asianet Suvarna News Asianet Suvarna News

ರಥದಿಂದ ಇಳಿಯಲು ಪ್ರಯಾಸ ಪಟ್ಟ ರೇವಣ್ಣ

ಪೂಜೆ ಸಲ್ಲಿಸುವ ಸಲುವಾಗಿ ರಥವೇರಿದ್ದ ರೇವಣ್ಣ ರಥದಿಂದ ಕೆಳಕ್ಕೆ ಇಳಿಯಲು ಪ್ರಯಾಸ ಪಟ್ಟ ಘಟನೆ ಬೇಲೂರಿನಲ್ಲಿ ನಡೆಯಿತು. 

Revanna struggles to get down from chariot of Beluru Chennakeshava temple
Author
Bengaluru, First Published Apr 17, 2019, 11:32 AM IST

ಬೇಲೂರು :  ಪೂಜೆ ಸಲ್ಲಿಸಲು ರಥವೇರಿದ್ದ ಸಚಿವ ಎಚ್‌.ಡಿ.ರೇವಣ್ಣ ಬಳಿಕ ಕೆಳಗೆ ಇಳಿಯಲು ಪ್ರಯಾಸ ಪಟ್ಟ ಪ್ರಸಂಗ ಮಂಗಳವಾರ ನಡೆಯಿತು.

ವಿಶ್ವಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ಪೂಜೆ ಸಲ್ಲಿಸಲು ರೇವಣ್ಣ ಆಗಮಿಸಿದ್ದರು. ರಥದ ಮೇಲೇರಿ ಪೂಜೆ ಸಲ್ಲಿಸುವಂತೆ ಅಭಿಮಾನಿಗಳು ಒತ್ತಾಯಿಸಿದರು. 

ಈ ವೇಳೆ ರಥದ ಮನೆಯಿಂದ ಹಾಕಿದ್ದ ಅಟ್ಟಣಿಗೆ ಮುಖಾಂತರ ರೇವಣ್ಣ ರಥವೇರಿದರು. ಈ ಸಂದರ್ಭದಲ್ಲಿ ರಥವನ್ನು ಎಳೆಯಲು ಇನ್ನೂ ಐದು ನಿಮಿಷ ಬಾಕಿ ಇತ್ತು. ಆದರೆ ಏಕಾಏಕಿ ನಗಾರಿ, ಮಂಗಳವಾದ್ಯ ಮೊಳಗಿದ್ದರಿಂದ ರಥ ಎಳೆಯಲು ಸಜ್ಜಾಗಿದ್ದ ಭಕ್ತರು ರಥವನ್ನು ಎಳೆದು, ರಥೋತ್ಸವಕ್ಕೆ ಚಾಲನೆ ನೀಡಿದರು. ಆದಕಾರಣ ದೇವಸ್ಥಾನದ ಆಗ್ನೇಯ ಮೂಲೆಯ ರಂಗಮಂದಿರದವರೆಗೆ ರಥವನ್ನು ಎಳೆದು ನಿಲ್ಲಿಸುವವರೆಗೂ ರೇವಣ್ಣ ರಥದೊಳಗೆ ಕೂರಬೇಕಾಯಿತು.

ಕೆಳಗಿಳಿಯಲು ಪ್ರಯಾಸ:

ಇನ್ನು ರಥವನ್ನು ಇಳಿಯುವ ವೇಳೆ ರೇವಣ್ಣ ಸಾಕಷ್ಟುಪ್ರಯಾಸ ಪಡಬೇಕಾಯಿತು. ಏಕೆಂದರೆ ರೇವಣ್ಣ ಹತ್ತುವಾಗ ರಥದ ಮನೆಯಿಂದ ಹತ್ತಲು ಅಟ್ಟಣಿಕೆ ಮಾಡಿದ್ದರು. ಆದರೆ ರಥ ಮುಂದೆ ಬಂದಿದ್ದರಿಂದ ಇಳಿಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅರ್ಧ ಗಂಟೆಗೂ ಹೆಚ್ಚುಕಾಲ ರಥದಲ್ಲೇ ಕುಳಿತಿರಬೇಕಾಗಿತ್ತು. ಮಧ್ಯಾಹ್ನ 1 ಗಂಟೆ ನಂತರ ವಿದ್ಯುತ್‌ ಇಲಾಖೆಯಿಂದ ಕಂಬ ರಿಪೇರಿ ಮಾಡುವ ಲಿಫ್ಟ್‌ ಏಣಿಯನ್ನು ತಂದು ರೇವಣ್ಣ ಅವರನ್ನು ಕೆಳಗೆ ಇಳಿಸಲಾಯಿತು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios