1993 ರ ಸ್ಫೋಟ ಪ್ರಕರಣದಲ್ಲಿ 5 ವರ್ಷ ಜೈಲುಶಿಕ್ಷೆಗೆ ಒಳಗಾಗಿರುವ ನಟ ಸಂಜಯ್ ದತ್  ಶಿಕ್ಷಾ ಅವಧಿ ಪೂರ್ಣಗೊಳ್ಳುವ 8 ತಿಂಗಳ ಮೊದಲೇ ವಿಐಪಿ ಎಂದು ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರೆ ಅವರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್’ಗೆ ಹೇಳಿದೆ.

ನವದೆಹಲಿ (ಜು.27): 1993 ರ ಸ್ಫೋಟ ಪ್ರಕರಣದಲ್ಲಿ 5 ವರ್ಷ ಜೈಲುಶಿಕ್ಷೆಗೆ ಒಳಗಾಗಿರುವ ನಟ ಸಂಜಯ್ ದತ್ ಶಿಕ್ಷಾ ಅವಧಿ ಪೂರ್ಣಗೊಳ್ಳುವ 8 ತಿಂಗಳ ಮೊದಲೇ ವಿಐಪಿ ಎಂದು ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರೆ ಅವರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್’ಗೆ ಹೇಳಿದೆ.

5 ವರ್ಷ ಶಿಕ್ಷಾವಧಿ ಪೂರ್ಣಗೊಳ್ಳುವ 8 ತಿಂಗಳ ಮೊದಲೇ ಸಂಜಯ್ ದತ್’ರನ್ನು ಸನ್ನಡತೆ ಆಧಾರದ ಮೇಲೆ ಸರ್ಕಾರ ಪೆರೋಲ್ ಮೇಲೆ ಬಿಡುಗಡೆ ಮಾಡಿತ್ತು. ಸರ್ಕಾರದ ಈ ಕ್ರಮದ ಬಗ್ಗೆ ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸುತ್ತಾ, ಸ್ಪಷ್ಟೀಕರಣ ಕೇಳಿತ್ತು. ಸಂಜಯ್ ದತ್ ಜೈಲಿನಲ್ಲಿದ್ದಾಗ ಉತ್ತಮ ನಡತೆ ಹೊಂದಿದ್ದರು. ಆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮಹಾ ಸರ್ಕಾರ ಹೇಳಿತ್ತು.

ಒಂದು ವೇಳೆ ಸಂಜಯ್ ದತ್ ನಿಯಮವನ್ನು ಉಲ್ಲಂಘಿಸಿದ್ದರೆ ಅವರನ್ನು ಮತ್ತೆ ಜೈಲಿಗೆ ಕಳುಹಿಸಿ ಎಂದು ಮಹಾ ಸರ್ಕಾರ ಬಾಂಬೆ ಹೈಕೋರ್ಟ್’ಗೆ ಇಂದು ಹೇಳಿದೆ.