ವೀರಪ್ಪನ್ ಹುಟ್ಟಡಗಿಸಿದ್ದ ಐಪಿಎಸ್ ಅಧಿಕಾರಿ ಕಾಶ್ಮೀರ ರಾಜ್ಯಪಾಲರ ಸಲಹೆಗಾರ..!

Retired IPS Officer Vijay Kumar appointed advisor to J&K governor
Highlights

ವೀರಪ್ಪನ್ ಹುಟ್ಟಡಗಿಸಿದ್ದ ಐಪಿಎಸ್ ಅಧಿಕಾರಿ ಕಾಶ್ಮೀರ ರಾಜ್ಯಪಾಲರ ಸಲಹೆಗಾರ

ಸಲಹೆಗಾರರಾಗಿ ನೇಮಕಗೊಂಡ ಮಾಜಿ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್

ವೀರಪ್ಪನ್ ಎನ್‌ಕೌಂಟರ್ ನೇತೃತ್ವದ ವಹಿಸಿದ್ದ ವಿಜಯ್ ಕುಮಾರ್

ಬಿಎಸ್ಎಫ್ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಕೆ

ನಕ್ಸಲ್ ನಿಗ್ರಹ ಪಡೆ ಮುಖ್ಯಸ್ಥರಾಗಿದ್ದ ವಿಜಯ್ ಕುಮಾರ್

ಶ್ರೀನಗರ(ಜೂ.22):ಕಾಡುಗಳ್ಳ ವೀರಪ್ಪನ್ ನನ್ನು ಮಟ್ಟ ಹಾಕಿದ್ದ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ತಜ್ಞ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಂಎನ್ ವೋಹ್ರಾ ಅವರ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ವಿಜಯ್ ಕುಮಾರ್ ಅವರೊಂದಿಗೆ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಬಿಬಿ ವ್ಯಾಸ್ ಅವರನ್ನೂ ಕೂಡ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ. 

ಈ ಹಿಂದೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯ ಸರ್ಕಾರಗಳ ತಲೆನೋವಿಗೆ ಕಾರಣವಾಗಿದ್ದ ಕಾಡುಗಳ್ಳ ವೀರಪ್ಪನ್ನನ್ನು ಇದೇ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಲಾಗಿತ್ತು. 

ವಿಜಯ್ ಈ ಹಿಂದೆ ಬಿಎಸ್ಎಫ್ ನಲ್ಲೂ ಸೇವೆ ಸಲ್ಲಿಸಿದ್ದರು. 1998 ರಿಂದ 2001ರವರೆಗೂ ವಿಜಯ್ ಕುಮಾರ್ ಬಿಎಸ್ಎಫ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ 2010ರಿಂದ 2012ರವರಗೂ ಸಿಆರ್ ಪಿಎಫ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

loader