ಗ್ರಾಹಕರ ಸೆಳೆಯುವ ಉದ್ದೇಶಕ್ಕಾಗಿ ಏನೆಲ್ಲ ಸರ್ಕಸ್ ಮಾಡಲಾಗುತ್ತದೆ ಅನ್ನೋದನ್ನ ವಿದೇಶಿಗರಿಂದ ಕಲೀಬೇಕು ಅನ್ಸುತ್ತೆ. ಪ್ರವಾಸಿಗರ ನೆಚ್ಚಿನ ತಾಣವೆಂದೇ ಖ್ಯಾತಿ ಗಳಿಸಿದ ಫ್ರಾನ್ಸ್ ನಲ್ಲಿ ಬೆತ್ತಲಾಗಿ ಆಹಾರ ಸೇವಿಸುವ ‘ಒ ನ್ಯಾಚುರಲ್’ ಎಂಬ ರೆಸ್ಟೋರೆಂಟ್ ಸ್ಥಾಪನೆಯಾಗಿದೆ.

ಇಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಯಾವುದೇ ಭೇದ-ಭಾವವಿಲ್ಲದೆ, ಎಲ್ಲರೂ ಜತೆಯಾಗಿ ನಗ್ನಾವಸ್ಥೆ ಯಲ್ಲೇ ವಿವಿಧ ಬಗೆಯ ಖಾದ್ಯ ಸೇವಿಸಬಹುದಂತೆ. ಟೋಕಿಯೋ, ಜಪಾನ್, ಆಸ್ಟ್ರೇಲಿಯಾದ ಮೇಲ್ಬೋರ್ನ್, ಲಂಡನ್ ಸೇರಿದಂತೆ ಇತರೆಡೆಗಳಲ್ಲಿ ಇಂಥ ಬೆತ್ತಲು ರೆಸ್ಟೋರೆಂಟ್‌ಗಳಿರುವುದು ವರದಿಯಾಗಿತ್ತು.