ಕೊಟ್ಲಿ (ಅ.2): ಭಾರತದ ವೀರ ಯೋಧರು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರನ್ನು ದಮನಗೈದ ಬಳಿಕ ಪಾಕ್‌ ವಿಶ್ವಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದು ,ಇದೀಗ ಪಾಕಿಸ್ತಾನ ಧೋರಣೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದೆ. ಇವತ್ತು ಪಾಕ್ ಆಕ್ರಮಿತ ಕಾಶ್ಮೀರದ ಕೊಟ್ಲಿ ಪ್ರದೇಶದಲ್ಲಿ ಸಾವಿರಾರು ನಾಗರಿಕರು ಬೀದಿಗಿಳಿದು ಪಾಕ್‌ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದಾರೆ. 'ಪಾಕ್‌ ಸೈನಿಕರು ಕಾಶ್ಮೀರಿಗಳ ಕಟುಕರು' , 'ಐಎಸ್‌ಐ ಗಿಂತ ನಾಯಿಯೇ ವಿಧೇಯವಾಗಿರುತ್ತದೆ' ಎನ್ನುವಂತಹ ಘೋಷಣೆಗಳನ್ನು ಮೊಳಗಿಸಿದ್ದಾರೆ.