ನವದೆಹಲಿ(ಸೆ.23): 36 ರಫೇಲ್​ ಜೆಟ್ ಯುದ್ದ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತೀಯ ರಕ್ಷಣಾ ಇಲಾಖೆ ಫ್ರಾನ್ಸ್​  ಜತೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದೆ. 

ನವದೆಹಲಿಯಲ್ಲಿ ನಡೆದ ಈ ಒಪ್ಪಂದಕ್ಕೆ  ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಸಹಿ ಮಾಡಿದ್ದಾರೆ. ವಾಯುಸೇನೆಯ ಅತ್ಯಂತ ಶಕ್ತಿ ಶಾಲಿ ಯುದ್ದ  ವಿಮಾನ ಎಂದೇ ಬಿಂಬಿತವಾದ ರಫೆಲ್​ ಜೆಟ್​ ಪೈಟರ್​ ವಿಮಾನವನ್ನು  ಫ್ರಾನ್ಸ್​ನಿಂದ  7.8 ಬಿಲಿಯನ್ ಯೂರೋ ಮೊತ್ತಕ್ಕೆ  ಭಾರತ ಕೊಂಡುಕೊಳ್ಳುವ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದೆ.

ಒಟ್ಟು 36 ಯುದ್ದ ವಿಮಾನಗಳ ಆಮದಿಗೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ. 2019 ರ ಆರಂಭದೊಳಗೆ ಫಾನ್ಸ್​  ರೆಫಲ್​ ಜೆಟ್ ವಿಮಾನವನ್ನು  ಭಾರತದ ವಾಯುಸೇನೆಗೆ ಹಸ್ತಾಂತರಿಸಲಿದೆ.

ಇನ್ನು  ಕಳೆದ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯುದ್ದ ವಿಮಾನಗಳ ಆಮದಿಗೆ ಭಾರತ ಮುಂದಾಗಿದೆ. ಇದೊಂದು ಮಹತ್ವದ ಒಪ್ಪಂದವಾಗಿದ್ದು, ಭಾರತೀಯ ವಾಯುಸೇನೆಗೆ ಇನ್ನಷ್ಟು ಭಲ ತುಂಬಲು ರೆಫಲ್​ ಜೆಟ್​ ಯುದ್ದ ವಿಮಾನಗಳು ಕೆಲವೇ ವರ್ಷಗಳಲ್ಲಿ  ಸೇನೆ ಸೇರಲಿವೆ.