ಬೆಂಗಳೂರು(ಸೆ.30): ಖ್ಯಾತ ಮಾನಸಿಕ ತಜ್ಞ ಡಾ. ಅಶೋಕ್ ಪೈ(68) ವಿಧಿವಶರಾಗಿದ್ದಾರೆ. ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸ್ಕಾಟ್ಲೆಂಡ್'ಗೆ ತರಳಿದ್ದ ಅವರಿಗೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.

1946ರ ಡಿಸೆಂಬರ್ 30ರಂದು ಜನಿಸಿದ್ದ ಡಾ. ಪೈ, ಶಿವಮೊಗ್ಗದಲ್ಲಿ ಮಾನಸ ನರ್ಸಿಂಗ್ ಹೋಮ್ ಎಂಬ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಕರ್ನಾಟಕ ಮಾನಸಿಕ ಆರೋಗ್ಯ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪೈ, ನಾಲ್ಕು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.

 ವೈದ್ಯ ವೃತ್ತಿ ಮಾತ್ರವಲ್ಲದೇ, ಬರಹಗಾರರು ಹಾಗೂ ಸಿನೆಮಾ ನಿರ್ಮಾಪಕರೂ ಆಗಿದ್ದರು. ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಆಘಾತ, ಮನಮರ್ಥನ ಎಂಬ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದರು.

ಸುಮಾರು ಒಂದು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ ಖ್ಯಾತಿಯನ್ನು ಹೊಂದಿದ್ದರು. ಅಶೋಕ್ ಪೈ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.