ಚೀನಾ ದೇಶವು ಭಾರತದಲ್ಲಿರುವ ಅರುಣಾಚಲಪ್ರದೇಶ ರಾಜ್ಯವನ್ನು ತನ್ನದೆಂದು ಪ್ರಬಲವಾಗಿ ವಾದಿಸುತ್ತಿದೆ. ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದೂ ಕರೆಯುವ ಚೀನಾ ನಿನ್ನೆ ಆ ರಾಜ್ಯದ 6 ಸ್ಥಳಗಳಿಗೆ ಹೊಸ ನಾಮಕರಣ ಮಾಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ನವದೆಹಲಿ(ಏ. 20): ಭಾರತಕ್ಕೆ ಸೇರಿದ ಅರುಣಾಚಲ ಪ್ರದೇಶವನ್ನು ತನ್ನದೆಂದು ವಾದಿಸುತ್ತಿರುವ ಚೀನಾ ನಿನ್ನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ರಾಜ್ಯದ ಕೆಲ ಪ್ರದೇಶಗಳ ಹೆಸರಿಗೆ ತನ್ನದೇ ಭಾಷೆಯಲ್ಲಿ ಮರುನಾಮಕರಣ ಮಾಡಿ ಬೀಗಿಕೊಳ್ಳುತ್ತಿದೆ. ಈ ವಿಷಯವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತ ಸರಕಾರ, ಹೆಸರು ಬದಲಿಸಿದರೆ ಅಕ್ರಮ ನಾಡು ಸ್ವಂತದ್ದಾಗುವುದಿಲ್ಲ ಎಂದು ಟಾಂಗ್ ಕೊಟ್ಟಿದೆ. ಅರುಣಾಚಲ ಯಾವತ್ತಿದ್ದರೂ ಭಾರತದ ಅವಿಭಾಜ್ಯ ಅಂಗ. ಅರುಣಾಚಲದ ಸ್ಥಳಗಳಿಗೆ ಹೊಸ ಹೆಸರು ಕೊಡುವ ಯಾವ ಹಕ್ಕೂ ಚೀನಾಗೆ ಇಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಚೀನಾ ದೇಶವು ಭಾರತದಲ್ಲಿರುವ ಅರುಣಾಚಲಪ್ರದೇಶ ರಾಜ್ಯವನ್ನು ತನ್ನದೆಂದು ಪ್ರಬಲವಾಗಿ ವಾದಿಸುತ್ತಿದೆ. ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದೂ ಕರೆಯುವ ಚೀನಾ ನಿನ್ನೆ ಆ ರಾಜ್ಯದ 6 ಸ್ಥಳಗಳಿಗೆ ಹೊಸ ನಾಮಕರಣ ಮಾಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹೆಸರುಗಳು ಸೌತ್ ಟಿಬೆಟ್ ಮೇಲೆ ಚೀನಾಗಿರುವ ಹಕ್ಕನ್ನು ಪ್ರತಿಫಲಿಸುತ್ತವೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸ್ಪಷ್ಟ ಸಾಕ್ಷ್ಯಾಧಾರಗಳಿಂದ ಮರುನಾಮಕರಣ ಮಾಡಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವ ಲೂ ಕಾಂಗ್ ಹೇಳಿಕೆ ನೀಡಿದ್ದಾರೆ.
ಚೀನಾದ ಈ ಕ್ರಮ ಮೊದಮೊದಲು ಹಾಸ್ಯಾತ್ಮಕವಾಗಿ ಕಾಣಿಸಿದರೂ ರಾಜತಾಂತ್ರಿಕ ದೃಷ್ಟಿಯಿಂದ ಚೀನಾದ ಧೋರಣೆ ಬಲು ಅಪಾಯಕಾರಿಯಾಗಿದೆ. ಭಾರತ ಕಟ್ಟುನಿಟ್ಟಾಗಿ ಉತ್ತರಿಸದಿದ್ದರೆ ಬಹಳ ಗಂಭೀರ ಪರಿಸ್ಥಿತಿ ತಲೆದೋರಬಹುದು ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
