ವಾಷಿಂಗ್ಟನ್‌ (ಫೆ.10): ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಅಮೆರಿಕಾದಲ್ಲಿ ಚರ್ಚೆ ಮುಂದುವರೆದಿದೆ.
ವಾಷಿಂಗ್ಟನ್ (ಫೆ.10): ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಅಮೆರಿಕಾದಲ್ಲಿ ಚರ್ಚೆ ಮುಂದುವರೆದಿದೆ.
ಅಮೆರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಅಯೋಗವು ವರದಿ ಬಿಡುಗಡೆ ಮಾಡಿದ್ದು, ಭಾರತದೊಂದಿಗೆ ನಡೆಯುವ ವಾಣಿಜ್ಯ ಹಾಗೂ ರಾಜತಾಂತ್ರಿಕ ದ್ವಿಪಕ್ಷೀಯ ಮಾತುಕತೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ಅಗ್ರಹಿಸಿದೆ.
ಪರಿಣಾಮಕಾರಿ ಅಪರಾಧ ದಂಡಸಂಹಿತೆ ಜಾರಿಯಲ್ಲಿಲ್ಲದ ಕಾರಣ ಭಾರತದಲ್ಲಿ ದಲಿತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಬಂದಿವೆ: 2014 ರಿಂದ ದೌರ್ಜನ್ಯ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆಯೆಂದು ವರದಿ ಹೇಳಿದೆ.
ಭಾರತವು ಬಹುತ್ವ ಹಿಂದಿದ ಹಾಗೂ ಪ್ರಜಾತಾಂತ್ರಿಕ ದೇಶವಾಗಿದ್ದು ಅಲ್ಲಿನ ಸಂವಿಧಾನವು ಜಾತಿ ಹಾಗೂ ಧರ್ಮಾಧರಿತ ಪಕ್ಷಪಾತವನ್ನು ನಿರುತ್ತೇಜಿಸುತ್ತದೆ, ಎಂದು USCIRF ಅಧ್ಯಕ್ಷ ಥಾಮಸ್ ಜೆ ರೀಸ್ ಹೇಳಿದ್ದಾರೆ.
ಕಳೆದ ಕೆಲ ವರ್ಷ ಗಳಲ್ಲಿ ಅಸಹನೆ ಹೆಚ್ಚಿದ್ದು ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ. ಸಾವಿಂಧಾನಿಕ ಬದ್ದತೆ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡ ಗಳನುಸಾರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆಯೆಂದು ರೀಸ್ ಹೇಳಿದ್ದಾರೆ.
ಭಾರತದ ಕೆಲ ರಾಜ್ಯಗಳಲ್ಲಿರುವ ಮತಾಂತರ ವಿರೋಧಿ ಕಾನೂನುಗಳು ಅಂತರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದ್ದು ಅವುಗಳನ್ನು ವಾಪಸು ಪಡೆಯುವಂತೆ ವರದಿಯು ಅಗ್ರಹಿಸಿದೆ.
ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಸರ್ಕಾರೇತರ ಸಂಸ್ಥೆಗಳ ಮೇಲೆ ಸರ್ಕಾರವು ಹೇರಿರುವ ನಿರ್ಬಂಧವನ್ನು ಹಿಂಪಡೆಯಬೇಕೆಂದು ಅಯೋಗವು ಅಗ್ರಹಿಸಿದೆಯಲ್ಲದೇ, ಭಾರತದಲ್ಲಿ ದ್ವೇಷ ಹರಡಲು ಅಮೆರಿಕಾದಲ್ಲಿದ್ದು ಹಣಸಂಗ್ರಹ ಮಾಡುವ ಹಿಂದುತ್ವ ಗುಂಪುಗಳನ್ನು ನಿಷೇಧಿಸಬೇಕೆಂದು ಅದು ಶಿಫಾರಸ್ಸು ಮಾಡಿದೆ.
