Asianet Suvarna News Asianet Suvarna News

ಅ್ಯಪಲ್ ವಾಚ್ ಇ-ಸಿಮ್ ಸೇವೆ: ಏರ್‌ಟೆಲ್ ವಿರುದ್ಧ ಜಿಯೋ ದೂರು

  • ಅ್ಯಪಲ್ ವಾಚ್ ಇ-ಸಿಮ್ ಸೇವೆಯ ನಿಯಮಗಳ ಉಲ್ಲಂಘನೆ ಆರೋಪ
  • ಏರ್‌ಟೆಲ್ ವಿರುದ್ಧ ದೂರಸಂಪರ್ಕ ಇಲಾಖೆಗೆ ರಿಲಯನ್ಸ್ ಜಿಯೋ ದೂರು
Reliance Jio Files Complaint Against Airtel Over Apple Watch eSIM Service

ನವದೆಹಲಿ: ಭಾರ್ತಿ ಏರ್‌ಟೆಲ್ ಕಂಪನಿಯು ಅ್ಯಪಲ್ ವಾಚ್ ಇ-ಸಿಮ್ ಸೇವೆಯ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ರಿಲಯನ್ಸ್ ಜಿಯೋ, ದೂರ ಸಂಪರ್ಕ ಇಲಾಖೆಗೆ  ದೂರು ನೀಡಿದೆ.

ನಿಯಮಗಳನ್ನು ಉಲ್ಲಂಘಿಸಿ ಏರ್‌ಟೆಲ್ ಕಂಪನಿಯು ಅ್ಯಪಲ್ ವಾಚ್ ಸೀರಿಸ್-3 ಸೇವೆಗಳನ್ನು ನೀಡುತ್ತಿದೆ ಎಂದು ಆರೋಪಿಸಿರುವ ರಿಲಯನ್ಸ್ ಜಿಯೋ, ಕೂಡಲೇ ಸೇವೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ.

ಭಾರ್ತಿ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋ- ಎರಡೂ ಕಂಪನಿಗಳು ಕಳೆದ ಮೇ.11 ರಿಂದ ಅ್ಯಪಲ್ ವಾಚ್ ಸೀರಿಸ್-3 ಸೇವೆಗಳನ್ನು ನೀಡಲು ಆರಂಭಿಸಿವೆ. 

ಈ ತಂತ್ರಜ್ಞಾನದಲ್ಲಿ, ಐಫೋನ್ ಬಳಕೆದಾರರ ಅ್ಯಪಲ್ ವಾಚ್ ಹಾಗೂ ಹ್ಯಾಂಡ್‌ಸೆಟ್ ಒಂದೇ ಸಂಖ್ಯೆಯನ್ನು ಹೊಂದಿದ್ದು, ಬಳಕೆದಾರರು  ಇ-ಸಿಮ್ [eSIM] ಮೂಲಕ ಸ್ವತಂತ್ರವಾಗಿ ಏಕಕಾಲದಲ್ಲಿ ಆ ಎರಡೂ ಸಾಧನಗಳನ್ನು ಕರೆ ಮಾಡಲು/ಸ್ವೀಕರಿಸಲು ಉಪಯೋಗಿಸಬಹುದಾಗಿದೆ.  

Follow Us:
Download App:
  • android
  • ios