Asianet Suvarna News Asianet Suvarna News

ರಾಜ್ ಬಿಡುವಂತೆ ಕಾಡುಗಳ್ಳನಿಗೂ ಕರುಣಾ ಆವಾಜ್!

ದ್ರಾವಿಡ ಚಳುವಳಿ ನಾಯಕ, ಡಿಎಂಕೆ ವರಿಷ್ಟ ಕರುಣಾನಿಧಿ ಚಿರನಿದ್ರೆಗೆ ಜಾರಿದ್ದಾರೆ. ಕರ್ನಾಟಕದ ಜೊತೆ ಹೇಳಿಕೊಳ್ಳುವ ನಂಟಿಲ್ಲದಿದ್ದರೂ ಅನೇಕ ವಿಚಾರಗಳಲ್ಲಿ ಇವರ ಪ್ರಭಾವವನ್ನು ಕಾಣಬಹುದು.  

Relation between Karnataka and Karunanidhi
Author
Bengaluru, First Published Aug 8, 2018, 12:57 PM IST

ಬೆಂಗಳೂರು (ಆ. 08): ದ್ರಾವಿಡ ಚಳುವಳಿ ನಾಯಕ, ಡಿಎಂಕೆ ವರಿಷ್ಟ ಕರುಣಾನಿಧಿ ಚಿರನಿದ್ರೆಗೆ ಜಾರಿದ್ದಾರೆ. ಕರ್ನಾಟಕದ ಜೊತೆ ಹೇಳಿಕೊಳ್ಳುವ ನಂಟಿಲ್ಲದಿದ್ದರೂ ಅನೇಕ ವಿಚಾರಗಳಲ್ಲಿ ಇವರ ಪ್ರಭಾವವನ್ನು ಕಾಣಬಹುದು. 

ದೇವೇಗೌಡರು ಪ್ರಧಾನಿಯಾಗಲು ಸಹಾಯ 

ರಾಜಕೀಯ ಮುತ್ಸದ್ದಿ ದೇವೇಗೌಡರು, ಕರುಣಾನಧಿಯಲ್ಲಿ 50 ವರ್ಷಗಳ ಸ್ನೇಹ. ದೇವೇಗೌಡರು ಪ್ರಧಾನಿಯಾಗಬೇಕೆಂದು ಕರುಣಾನಿಧಿ ಬಯಸಿದ್ದರು. 

"ನಾನು ನನ್ನ ದೊಡ್ಡಣ್ಣನನ್ನು ಇಂದು ಕಳೆದುಕೊಂಡೆ. ಪ್ರಧಾನಿ ಹುದ್ದೆಗೆ ನನ್ನ ಹೆಸರನ್ನು ಪ್ರಸ್ತಾಪಿಸುವುದರಲ್ಲಿ ಕರುಣಾನಿಧಿಯವರ ಪಾತ್ರ ದೊಡ್ಡದು. ನಾನು 1996 ರಲ್ಲಿ ಪ್ರಧಾನಿಯಾಗಲು ಕರುಣಾನಿಧಿ ಸಹಾಯ ಮರೆಯುವಂತಿಲ್ಲ" ಎಂದ ದೇವೇಗೌಡರು ಭಾವನಾತ್ಮಕವಾಗಿ ಹೇಳಿದ್ದಾರೆ.  

ಕನ್ನಡಿಗರೊಂದಿಗೆ ’ನಿಧಿ’ ನಂಟು; ಬೇವು ಬೆಲ್ಲ ಎರಡೂ ಉಂಟು!

ಕನ್ನಡಿಗರು ಮರೆಯುವಂತಿಲ್ಲ 

2000 ನೇ ಇಸವಿಯಲ್ಲಿ ಕಾಡುಗಳ್ಳ ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸುತ್ತಾನೆ. 108 ದಿನಗಳ ಕಾಲ ಬಂಧನದಲ್ಲಿಡುತ್ತಾನೆ. ಆಗ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತದೆ. ಆ ಸಮಯದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದು ಕರುಣಾನಿಧಿ. ಕರ್ನಾಟಕದಲ್ಲಿ ಎಸ್ ಎಂ ಕೃಷ್ಣ  ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಸರ್ಕಾರದೊಂದಿಗೆ ಸಹಕಾರ ಸಾಧಿಸಿ ರಾಜ್  ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ.  ಪಾರ್ವತಮ್ ರಾಜ್ ಕುಮಾರ್, ಶಿವರಾಜ್ ಕುಮರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕರುಣಾನಿಧಿಗೆ ಕೃತಜ್ಞತೆ ಸಲ್ಲಿಸುತ್ತಾರೆ. 

Relation between Karnataka and Karunanidhi

ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಕರುಣಾನಿಧಿ ಕುಟುಂಬದ ಜಮೀನು ಕೂಡಾ ಇದೆ. ಹೀಗೆ ಕರ್ನಾಟಕದೊಂದಿಗೆ ಕರುಣಾನಿಧಿ ನಂಟು ಬೇವು-ಬೆಲ್ಲ ಎರಡೂ ಉಂಟು!  

Follow Us:
Download App:
  • android
  • ios