1958ರ ಫೆ.3ರಂದು ಮುಂಬೈನಲ್ಲಿ ಜನಿಸಿದ ರೀಮಾ ಲಾಗೂ ಅವರ ಪೂರ್ವಾಶ್ರಮದ ಹೆಸರು ನಯನ್ ಭಾದ್'ಭಡೆ. ಇವರ ತಾಯಿ ಮಂದಾಕಿನಿ ಅವರು ಮರಾಠಿ ರಂಗಭೂಮಿಯಲ್ಲಿ ಹೆಸರಾಂತ ಕಲಾವಿದೆ. 80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಡುವ ಮುನ್ನ ರೀಮಾ ಲಾಗೂ ಕೂಡ ಮರಾಠಿ ರಂಗಭೂಮಿಯಲ್ಲಿ ನಟಿಸಿ ಸೈ ಎನಿಸಿದ್ದವರು.

ಮುಂಬೈ(ಮೇ 18): ಖ್ಯಾತ ಹಿರಿಯ ನಟಿ ರೀಮಾ ಲಾಗೂ ನಿಧನರಾಗಿದ್ದಾರೆ. ಎದೆನೋವಿನಿಂದ ನಿನ್ನೆ ರಾತ್ರಿ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದ 59 ವರ್ಷದ ಬಾಲಿವುಡ್ ನಟಿ ರೀಮಾ ಗುರುವಾರ ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಮಗಳು ಮೃಣ್ಮಯೀ ಲಾಗೂ ಮತ್ತು ಅಳಿಯ ವಿನಯ್ ವಾಯ್ಕುಲ್ ಅವರನ್ನು ರೀಮಾ ಅಗಲಿದ್ದಾರೆ.

ಸಲ್ಮಾನ್ ಖಾನ್ ಅವರ ಬಹಳಷ್ಟು ಸಿನಿಮಾಗಳಲ್ಲಿ ತಾಯಿಯ ಪಾತ್ರದ ಮೂಲಕ ರೀಮಾ ಲಾಗೂ ಚಿರಪರಿಚಿತರಾಗಿದ್ದಾರೆ. "ಹಮ್ ಆಪ್ಕೆ ಹೈ ಕೌನ್", "ಕುಚ್ ಕುಚ್ ಹೋತಾ ಹೈ", "ಹಮ್ ಸಾಥ್ ಸಾಥ್ ಹೈ", "ವಾಸ್ತವ್" ಇತ್ಯಾದಿ ಸಿನಿಮಾಗಳಲ್ಲಿ ಅಭಿನಯಿಸಿರುವ ರೀಮಾ ಲಾಗೂ, "ಶ್ರೀಮಾನ್ ಶ್ರೀಮತಿ" ಮತ್ತು "ತೂ ತೂ ಮೈ ಮೈ" ಟಿವಿ ಶೋಗಳ ಮೂಲಕ ಹೆಚ್ಚು ಪರಿಚಿತರಾಗಿದ್ದಾರೆ.

1958ರ ಫೆ.3ರಂದು ಮುಂಬೈನಲ್ಲಿ ಜನಿಸಿದ ರೀಮಾ ಲಾಗೂ ಅವರ ಪೂರ್ವಾಶ್ರಮದ ಹೆಸರು ನಯನ್ ಭಾದ್'ಭಡೆ. ಇವರ ತಾಯಿ ಮಂದಾಕಿನಿ ಅವರು ಮರಾಠಿ ರಂಗಭೂಮಿಯಲ್ಲಿ ಹೆಸರಾಂತ ಕಲಾವಿದೆ. 80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಡುವ ಮುನ್ನ ರೀಮಾ ಲಾಗೂ ಕೂಡ ಮರಾಠಿ ರಂಗಭೂಮಿಯಲ್ಲಿ ನಟಿಸಿ ಸೈ ಎನಿಸಿದ್ದವರು.

ಮರಾಠಿ ನಟ ವಿವೇಕ್ ಲಾಗೂ ಅವರನ್ನ ವಿವಾಹವಾದ ಬಳಿಕ ನಯನ್ ಭಾಗ್'ಭಡೆಯವರು ತಮ್ಮ ಹೆಸರನ್ನು ರೀಮಾ ಲಾಗೂ ಎಂದು ಬದಲಾಯಿಸಿಕೊಂಡಿದ್ದರು. ಮಗಳು ಮೃಣ್ಮಯೀ ಜನಿಸಿದ ಕೆಲ ವರ್ಷಗಳ ಬಳಿಕ ರೀಮಾ ಮತ್ತು ವಿವೇಕ್ ಲಾಗೂ ದಂಪತಿ ವಿಚ್ಛೇದನ ಪಡೆದಿತ್ತು.