'ಜನಾರ್ದನ ರೆಡ್ಡಿಯನ್ನು ಕೆಣಕಿದ್ರೆ ಸರಿ ಇರಲ್ಲ. ಜನಾರ್ದನ ರೆಡ್ಡಿ ಸೈಲೆಂಟ್ ಆಗಿದ್ದಾರೆ, ವೈಲೆಂಟ್ ಮಾಡಬೇಡಿ. ಜನಾರ್ದನ ರೆಡ್ಡಿ ಸುಮ್ಮನಿದ್ದಾರೆಂದು ಕೆಣಕಬೇಡಿ.  ಕುಮಾರಸ್ವಾಮಿಯವರು ಸುಳ್ಳು ಆರೋಪ ಮಾಡಿದ್ದಾರೆ.ಅವರ ಹೇಳಿಕೆ ಸಣ್ಣತನದಿಂದ ಕೂಡಿದೆ.

ಬಳ್ಳಾರಿ(ಮಾ): ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ತಮ್ಮ ಸೋದರನ ವಿರುಧ್ಧ ಆರೋಪಕ್ಕೆ ಹೆಚ್'ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜನಾರ್ದನ ರೆಡ್ಡಿಯನ್ನು ಕೆಣಕಿದ್ರೆ ಸರಿ ಇರಲ್ಲ. ಜನಾರ್ದನ ರೆಡ್ಡಿ ಸೈಲೆಂಟ್ ಆಗಿದ್ದಾರೆ, ವೈಲೆಂಟ್ ಮಾಡಬೇಡಿ. ಜನಾರ್ದನ ರೆಡ್ಡಿ ಸುಮ್ಮನಿದ್ದಾರೆಂದು ಕೆಣಕಬೇಡಿ. ಕುಮಾರಸ್ವಾಮಿಯವರು ಸುಳ್ಳು ಆರೋಪ ಮಾಡಿದ್ದಾರೆ.ಅವರ ಹೇಳಿಕೆ ಸಣ್ಣತನದಿಂದ ಕೂಡಿದೆ. ಆರೋಪಿಸುವ ಮುನ್ನ ಎಚ್​ಡಿಕೆ ಸ್ವಲ್ಪ ಯೋಚಿಸಿ ಮಾತನಾಡಲಿ. ಮಾಜಿ ಸಿಎಂ ಕುಮಾರಸ್ವಾಮಿಗೆ ಕೈ ಮುಗಿದು ಕೇಳುತ್ತೇನೆ. ಜನಾರ್ದನ ರೆಡ್ಡಿಯನ್ನು ಸುಮ್ಮನೆ ವೈಲೆಂಟ್ ಮಾಡಬೇಡಿ. ಅವರನ್ನು ಕೆಣಕಿದರೆ ಸರಿ ಇರಲ್ಲ'. ಆರೋಪ ಮಾಡುವ ಮುನ್ನ ನೋಡಿ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.

ರೆಡ್ಡಿ ಮೇಲಿನ ಕೇಸ್ ಹಿಂಪಡೆಯಲು ರೆಡ್ಡಿ 500 ಕೋಟಿ ರೂ. ಹಣವನ್ನು ಬಿಜೆಪಿಗೆ ನೀಡಿದ್ದಾರೆ ಅನ್ನೋ ಆರೋಪ ಮಾಡಿರುವ ಎಚ್‌ಡಿಕೆ ಆರೋಪಕ್ಕೆ ಜನಾರ್ಧನರೆಡ್ಡಿ ಸಹೋದರ ಸೋಮಶೇಖರರೆಡ್ಡಿ ತಿರುಗೇಟು ನೀಡಿದ್ದಾರೆ.