ನವದೆಹಲಿ[ಮೇ.25]: ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರೂ, ಇಬ್ಬರು ಕೇಂದ್ರ ಸಚಿವರು ಮಾತ್ರ ಸೋಲುಕಂಡಿದ್ದಾರೆ.

ಮೋದಿ ಸಂಪುಟದ ಹಿರಿಯ ಸಚಿವರಾದ ಹರ್‌ದೀಪ್‌ ಪುರಿ ಹಾಗೂ ಕೆ.ಜೆ. ಅಲ್ಫೋನ್ಸ್‌ ಅವರು ತಮ್ಮ ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಅಲ್ಫೋನ್ಸ್‌ ಅವರು ತಮ್ಮ ಎದುರಾಳಿಯಾದ ಸಿಪಿಎಂ ಪಕ್ಷದ ಪಿ. ರಾಜೀವ್‌ ಅವರಿಂದ 1,84,361 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಇನ್ನು ಪಂಜಾಬ್‌ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಅಖಾಡಕ್ಕಿಳಿದಿದ್ದ ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾದ ಗುರ್ಜೀತ್‌ ಸಿಂಗ್‌ ಔಜಲಾ ಅವರು 1 ಲಕ್ಷ ಮತಗಳ ಅಂತರದಿಂದ ಹರದೀಪ್‌ ಸಿಂಗ್‌ ಪುರಿಯನ್ನು ಸೋಲುಣಿಸಿದ್ದಾರೆ.