Asianet Suvarna News Asianet Suvarna News

‘ರಾಜ್ಯದಲ್ಲಿ ತ್ರಿಶಂಕು ಆಡಳಿತ ಸ್ಥಿತಿ : ಭವಿಷ್ಯ ನುಡಿದ ನಾಯಕ’

ಕರ್ನಾಟಕ ರಾಜಕೀಯದಲ್ಲಿ ದೋಸ್ತಿ ಸರ್ಕಾರ ಆಡಳಿತ ಮುಗಿದಿದೆ. ಬಿಜೆಪಿ ಅಧಿಕಾರ ಗದ್ದುಗೆಗೆ ಏರಲು ಸಿದ್ಧವಾಗಿದ್ದು, ಇದು ತ್ರಿಶಂಕು ಆಡಳಿತವಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

Rebel MLAs To Be disqualified Says Shivashankar Reddy
Author
Bengaluru, First Published Jul 24, 2019, 4:09 PM IST

ಚಿಕ್ಕಬಳ್ಳಾಪುರ [ಜು.24] : ವಿಶ್ವಾಸಮತ ಯಾಚನೆ ದೊಸ್ತಿ ಸರ್ಕಾರ ಬಹುಮತ ಕಳೆದುಕೊಂಡು ಕೆಳಕ್ಕೆ ಇಳಿದಿದೆ. ಇದಕ್ಕೆ ಕಾರಣರಾದ ಅತೃಪ್ತರಾದ ಎಲ್ಲಾ ಶಾಸಕರ ಅನರ್ಹತೆ ಖಚಿತ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. 

ಇದರ ಬೆನ್ನಲ್ಲೇ ರಾಜ್ಯದಲ್ಲಿ ತ್ರಿಶಂಕು ಆಡಳಿತ ಸ್ಥಿತಿ ನಿರ್ಮಾಣವಾಗಲಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಶಿವಶಂಕರ ರೆಡ್ಡಿ ಭವಿಷ್ಯ ನುಡಿದಿದ್ದಾರೆ. 

ಅತೃಪ್ತರಾಗಿ ತೆರಳಿ 15 ಮಂದಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಆಂತರಿಕವಾಗಿ ಪಕ್ಷದಲ್ಲೇ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶವಿತ್ತು. ಆದರೆ ರಾಜೀನಾಮೆ ನೀಡಿ ತೆರಳಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ, ಹಣದ ಆಸೆಯಿಂದ ಬಿಜೆಪಿ ಬಲೆಗೆ ಬಿದ್ದಿದ್ದಾರೆ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು. 

Follow Us:
Download App:
  • android
  • ios