Asianet Suvarna News Asianet Suvarna News

ರಾಜೀನಾಮೆ ನೀಡಲು ಮುಂದಾದ ಅತೃಪ್ತರು, ಯಾರಿದ್ದಾರೆ ಲಿಸ್ಟ್‌ನಲ್ಲಿ?

ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ನಾಂದಿ ಹಾಡಿದ್ದಾರೆ. ಆ ಮೂಲಕ ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲು ತಯಾರಿ ನಡೆಸಿದ್ದಾರೆ. ಯಾರು ಯಾರಿದ್ದಾರೆ ಲಿಸ್ಟ್‌ನಲ್ಲಿ?

Rebel JDS and Congress MLAs to resign soon
Author
Bengaluru, First Published Jul 1, 2019, 9:38 AM IST

ಬೆಂಗಳೂರು (ಜೂ.1):  ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಕ್ಕೆ ನಾಂದಿ ಹಾಡಿದ್ದಾರೆ. ಆನಂದ್ ಸಿಂಗ್ ಮೂಲಕ ಆರಂಭವಾದ ರಾಜೀನಾಮೆ ಪರ್ವ ಮುಂದುವರಿಯುವ ಲಕ್ಷಣಗಳಿದ್ದು, ಇನ್ನೂ ಒಂಬತ್ತು ಶಾಸಕರು ಶೀಘ್ರವೇ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ಇದೆ. 

ಜೂನ್ 30ರ ರಾತ್ರಿ ಅತೃಪ್ತ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಹಸ್ಯ ಸಭೆ ನಡೆಸಿದ್ದು, ರಾಜೀನಾಮೆ ನೀಡುವ ಸಂಬಂಧ ಚರ್ಚಿಸಿದ್ದಾರೆ. ಚರ್ಚೆಯಂತೆ ಜು.1ರ ಬೆಳಗ್ಗೆ 7.15ಕ್ಕೆ ಆನಂದ್ ಸಿಂಗ್ ಸ್ಪೀಕರ್ ರಮೇಶ್ ಕುಮಾರ್ ಅವರ ಮನೆಗೇ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇವರೊಂದಿಗೆ ಈ ಕೆಳಕಂಡ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ....

- ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ (ಜೆಡಿಎಸ್)
- ಹುಣಸೂರಿನ ಎಚ್.ವಿಶ್ವನಾಥ್ (ಜೆಡಿಎಸ್)
- ಕೆ.ಆರ್. ಪೇಟೆಯ ನಾರಾಯಣ ಗೌಡ (ಜೆಡಿಎಸ್)
- ಗೋಕಾಕ್‌ನ ರಮೇಶ್ ಜಾರಕಿಹೊಳಿ (ಕಾಂಗ್ರೆಸ್)
- ಅಥಣಿಯ ಮಹೇಶ್ ಕುಮಟಹಳ್ಳಿ (ಕಾಂಗ್ರೆಸ್)
- ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ (ಕಾಂಗ್ರೆಸ್)
- ಹೀರೆಕೆರೂರು ಶಾಸಕ ಬಿ.ಸಿ.ಪಾಟೀಲ್ (ಕಾಂಗ್ರೆಸ್)

ಇನ್ನೂ ಕೆಲವು ಶಾಸಕರು ರಹಸ್ಯ ಸಭೆಯಲ್ಲಿ ಪಾಲ್ಗೊಂಡಿದ್ದು, ಕೆಲವರು ರಾಜೀನಾಮೆ ನೀಡುವ ಬಗ್ಗೆ ದ್ವಂದ್ವ ನಿಲುವು ತಾಳಿದ್ದಾರೆ ಎಂದು ಹೇಳಲಾಗಿದೆ. 

Follow Us:
Download App:
  • android
  • ios