ಬೆಂಗಳೂರು[ಜು.09]: 'ರಾಜಕೀಯದಲ್ಲಿ ಇಲ್ಲದಿದ್ರೂ ಪರವಾಗಿಲ್ಲ ಆದರೆ ರಾಜೀನಾಮೆ ವಾಪಸ್ ಪಡೆಯೋ ಮಾತೇ ಇಲ್ಲ' ಎನ್ನುವ ಮೂಲಕ ಕಾಂಗ್ರೆಸ್ ಎಸೆದಿದ್ದ ಅನರ್ಹತೆ ಅಸ್ತ್ರಕ್ಕೆ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಡೋಂಟ್ ಕೇರ್ ಎಂದಿದ್ದಾರೆ.

"

ಸಿದ್ದರಾಮಯ್ಯ ಎಸೆದ ಅನರ್ಹತೆ ಅಸ್ತ್ರಕ್ಕೆ ಮುಂಬೈ ಸೇರಿರುವ ಅತೃಪ್ತ ಶಾಸಕ ಭೈರತಿ ಬಸವರಾಜ್ ಟಾಂಗ್ ನೀಡುತ್ತಾ 'ನಾವು ಒಗ್ಗಟ್ಟಾಗಿದ್ದೇವೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ. ನಮ್ಮ ಕೆಲಸ ಆಗದಿದ್ದರೆ ನಾವ್ಯಾಕೆ ಬಗ್ಗಬೇಕು. ಶಾಪಿಂಗ್ ಹಾಗೂ ದೇವರ ದರ್ಶನಕ್ಕೆ ಮುಂಬೈಗೆ ಬಂದಿದ್ದೇವೆ. 7 ಬಾರಿ ಶಾಸಕ ರಾಮಲಿಂಗಾ ರೆಡ್ಡಿಯವರಿಗೆ ಅನ್ಯಾಯವಾಗಿದೆ. ಈಗ ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ. ಅವರು ಅನರ್ಹ ಮಾಡಿದರೂ ಸರಿಯೇ, ರಾಜೀನಾಮೆ ವಾಪಸ್ ಪಡೆಯಲ್ಲ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ನಾಯಕರು ಕೂಡಿಟಿದ್ದಾರಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ಅತೃಪ್ತ ಶಾಸಕ ಬಿ. ಸಿ ಪಾಟೀಲ್ 'ರೀ ನಮ್ಮನ್ನು ಯಾರೂ ಕೂಡಿಟ್ಟಿಲ್ಲ. ಸ್ಪೀಕರ್ ಕರೆದರೆ ಸಂಜೆಯೇ ತೆರಳಲು ಸಿದ್ಧ. ಯಾವ್ ಕುದುರೆ ವ್ಯಾಪಾರ ಕಣ್ರೀ.. ಅದು ಯಾರಿಗೆ ಬೇಕು. ನಾವು ಮುಂಬೈಗೆ ಆಟ ಆಡಲು ಬಂದಿಲ್ಲ' ಎಂದಿದ್ದಾರೆ.