ಉದ್ಯಮಿ ವಿಜಯ್ ಮಲ್ಯ ಕಡೆಗೂ ಹಣವನ್ನು ಪಾವತಿಸಲು ಮುಂದಾಗಿದ್ದಾರೆ.  ರೂ.9000 ಕೋಟಿ ಸುಸ್ಥಿದಾರರಾಗಿದ್ದು, ಒಂದೇ ಬಾರಿ ಇತ್ಯರ್ಥ ಮಾಡಲು ಸಿದ್ಧನಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.

ನವದೆಹಲಿ (ಮಾ.10): ಉದ್ಯಮಿ ವಿಜಯ್ ಮಲ್ಯ ಕಡೆಗೂ ಹಣವನ್ನು ಪಾವತಿಸಲು ಮುಂದಾಗಿದ್ದಾರೆ. ರೂ.9000 ಕೋಟಿ ಸುಸ್ಥಿದಾರರಾಗಿದ್ದು, ಒಂದೇ ಬಾರಿ ಇತ್ಯರ್ಥ ಮಾಡಲು ಸಿದ್ಧನಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದೇ ಬಾರಿ ಇತ್ಯರ್ಥ ಮಾಡುವ ಬಗ್ಗೆ ನೀತಿಗಳಿವೆ. ಸಾಕಷ್ಟು ಸಾಲಗಾರರು ಇದೇ ರೀತಿ ಇತ್ಯರ್ಥಪಡಿಸಿದ್ದಾರೆ. ಆದರೂ ನಮಗೆ ಯಾಕೆ ನಿರಾಕರಿಸುತ್ತಿದ್ದಾರೆ. ಬ್ಯಾಂಕುಗಳು ಇದನ್ನು ಪರಿಗಣಿಸದೇ ಇದ್ದುದರಿಂದ ನಾವು ಈ ವಿಚಾರವನ್ನು ಸುಪ್ರೀಂಕೋರ್ಟ್ ಮುಂದಿಟ್ಟಾಗ ಅದು ನಿರಾಕರಿಸಿದೆ. ನ್ಯಾಯೋಚಿತ ಆಧಾರದ ಮೇಲೆ ಇತ್ಯರ್ಥಪಡಿಸಲು ನಾನು ಸಿದ್ಧನಿದ್ದೇನೆ. ಎಂದು ಮಲ್ಯ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಈ ಎಲ್ಲಾ ತೊಡಕುಗಳನ್ನು ಕೊನೆಗಾಣಿಸಬೇಕು. ನಮ್ಮ ಜೊತೆ ಮಾತುಕತೆ ನಡೆಸಲು ಹಾಗೂ ಇತ್ಯರ್ಥಪಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಬೇಕೆಂದು ಆಶಿಸುತ್ತೇನೆ ಎಂದು ಮಲ್ಯ ಹೇಳಿದ್ದಾರೆ.

Scroll to load tweet…