ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಸಿಎಂ ಸಿದ್ದರಾಮಯ್ಯ ಸಚಿವ ತನ್ವೀರ್ ಸೇಠ್ ಮಾಡಿದ ತಪ್ಪನ್ನು ತಪ್ಪೇ ಅಲ್ಲ ಅನ್ನುವ ರೀತಿ ಮಾತನಾಡುತ್ತಿದ್ದಾರೆ. ಅಂದು ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ , ಸಿಎಂ ಆದ ಬಳಿಕ ತಮ್ಮ ಮಾತಿನ ದಾಟಿಯನ್ನೇ ಬದಲಾಯಿಸುತ್ತಿದ್ದಾರೆ.
ಬೆಂಗಳೂರು(ನ.11): ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಸಿಎಂ ಸಿದ್ದರಾಮಯ್ಯ ಸಚಿವ ತನ್ವೀರ್ ಸೇಠ್ ಮಾಡಿದ ತಪ್ಪನ್ನು ತಪ್ಪೇ ಅಲ್ಲ ಅನ್ನುವ ರೀತಿ ಮಾತನಾಡುತ್ತಿದ್ದಾರೆ. ಅಂದು ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ , ಸಿಎಂ ಆದ ಬಳಿಕ ತಮ್ಮ ಮಾತಿನ ದಾಟಿಯನ್ನೇ ಬದಲಾಯಿಸುತ್ತಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ನೀಲಿಚಿತ್ರ ವೀಕ್ಷಿಸಿದ್ದ ಅಂದಿನ ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ಕೃಷ್ಣ ಪಾಲೇಮರ್, ಸಿಸಿ ಪಾಟೀಲ್ ವಿರುದ್ಧ ಗುಡುಗಿದ್ದರು. ಅಧಿವೇಶದ ಸಂದರ್ಭದಲ್ಲಿ ಅಶ್ಲೀಲ ದೃಶ್ಯ ನೋಡಿ ಸಿಕ್ಕಿ ಬಿದ್ದಿದ್ದ ಮೂವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಮಾಧ್ಯಮಕ್ಕಿಂತ ಬೇರೆನೂ ಸಾಕ್ಷಿ ಬೇಕು ಅಂತಾ ಅಂದಿನ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದರು.
ಆದರೆ ಇದೇ ಸಿದ್ದರಾಮಯ್ಯರವರು, ಇವತ್ತು ಫುಲ್ ಉಲ್ಟಾ ಹೊಡೆಯುತ್ತಿದ್ದಾರೆ. ನಿನ್ನೆ ರಾಯಚೂರಿನ ಟಿಪ್ಪು ಜಯಂತಿ ವೇಳೆ ಅಶ್ಲಿಲ ದೃಶ್ಯ ವೀಕ್ಷಿಸಿ ಸಿಕ್ಕಿಬಿದ್ದ ಶಿಕ್ಷಣ ಸಚಿವ ತನ್ವೀರ್ ಸೇಠ್ ರಕ್ಷಣೆಗೆ ನಿಂತಿದ್ದಾರೆ. ಅಂದು ವಿಧಾನಸೌಧವೇ ಕೇಳಿಸುವ ಹಾಗೆ ಕೂಗಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ಸಂಪುಟ ಸಹೋದ್ಯೋಗಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ನನಗೆ ಏನೂ ಗೊತ್ತಿಲ್ಲ. ರಿಪೋರ್ಟ್ ತರಿಸಿ ನೋಡುತ್ತೇವೆ. ಮಾಧ್ಯಮಗಳನ್ನು ನಂಬಿಕೊಳ್ಳಲು ಆಗುತ್ತದಾ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸಿದ್ದಾರೆ.
