ಜೈಪುರ : ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಿದ್ದು,  ಕರನ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮರು ಚುನಾವಣೆ ನಡೆಸಲಾಗುತ್ತಿದೆ. 

ಕರನ್ ಪುರ ಕ್ಷೇತ್ರದ ಬೂತ್ ಸಂಖ್ಯೆ 163ರಲ್ಲಿ  ಮುಂಜಾನೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 5 ಗಂಟೆವರೆಗೆ ಮುಂದುವರಿಯಲಿದೆ.

ಚುನಾವಣೆ ದಿನದಂದು ಇಲ್ಲಿ ಮತಯಂತ್ರದಲ್ಲಿ ದೋಷ ಎದುರಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮರು ಚುನಾವಣೆಗೆ ಆದೇಶ ನೀಡಿತ್ತು. 

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆದಿತ್ತು. ಇಲ್ಲಿನ ಅಲ್ವಾರ್ ಕ್ಷೇತ್ರದಲ್ಲಿ ಬಿಎಸ್ ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ಮೃತಪಟ್ಟ ಹಿನ್ನೆಲೆ ಚುನಾವಣೆ ಮುಂದೂಡಲಾಗಿತ್ತು.  

ದೇಶದ ಪಂಚರಾಜ್ಯಗಳಾದ ಚತ್ತೀಸ್ ಗಢ, ಮಿಜೋರಾಂ, ಮಧ್ಯ ಪ್ರದೇಶ,  ತೆಲಂಗಾಣದಲ್ಲಿಯೂ ಡಿ.7 ರಂದೇ ಚುನಾವಣೆ ಮುಕ್ತಾಯವಾಗಿದ್ದು, ಐದೂ ರಾಜ್ಯಗಳ ಫಲಿತಾಂಶ 11 ರಂದು  ಪ್ರಕಟವಾಗುತ್ತಿದೆ.