ವಡೋದರ [ನ.02]: ಆಸಿಯಾನ್ ರಾಷ್ಟ್ರಗಳ ಒಕ್ಕೂಟದಿಂದ ಪ್ರಸ್ತಾಪಿತ ಸಮಗ್ರ ಪ್ರಾದೇಶಿಕ ಆರ್ಥಿಕ ಪಾಲುಗಾರಿಕೆ (ಆರ್ ಸಿಇಪಿ) ಯೋಜನೆ ಹೈನೋದ್ಯಮಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳು ವಿರೋಧ ವ್ಯಕ್ತ ಪಡಿಸಿವೆ. 

ಇದರ ಬೆನ್ನಲ್ಲೇ, ಈ ಯೋಜನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಆಗ ಡಬ್ಲ್ಯುಟಿಒ-ಗ್ಯಾಟ್‌ ಒಪ್ಪಂದ, ಈಗ ಆರ್‌ಸಿಇಪಿ ಒಪ್ಪಂದ: ಏನಿದು ಮುಕ್ತ ವ್ಯಾಪಾರದ ಗುಮ್ಮ?...

ಗುರುವಾರ ಗುಜರಾತ್‌ನ ಆನಂದ್‌ನಲ್ಲಿ ನಡೆದ ಅಮೂಲ್‌ನ 74 ನೇ ಸಂಸ್ಥಾಪನಾ ದಿನದಂದು ಮುಖ್ಯ ಅತಿಥಿಯಾಗಿ ಬಂದಿದ್ದ ಗೋಯಲ್‌ಗೆ,  ಆರ್‌ಸಿಇಪಿ ಜಾರಿ ಮಾಡಬಾರದು ಎಂದು ರೈತರು ಮನವಿ ಸಲ್ಲಿಸಿದ್ದರು.

ಈ ವೇಳೆ ದೇಶದ ಹೈನುಗಾರಿಕೆಗೆ ತೊಂದರೆಯಾಗುವ ಯಾವ ನಿರ್ಧಾರವನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಹೇಳಿದ್ದಾರೆ.