ರಾಜ್ಯಸಭೆಯಲ್ಲಿಂದು ನೆರೆಯ ಪಾಕಿಸ್ತಾನವನ್ನು ಉಗ್ರರಾಷ್ಟ್ರವೆಂದು ಘೋಷಿಸುವಂತೆ ಒತ್ತಾಯಿಸಿ ಖಾಸಗಿ ವಿಧೇಯಕ ಮಂಡಿಸಿದರು.

ನವದೆಹಲಿ(ಫೆ.03): ವಿಶ್ವದ ದೊಡ್ಡಣ್ಣ ಅಮೆರಿಕಾ ನಂತರ ಕುವೈತ್ ಕೂಡ ಪಾಕಿಸ್ತಾನಕ್ಕೆ ಭಯೋತ್ಪಾಕ ಹಣೆಪಟ್ಟಿ ಕಟ್ಟಿ ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಭಾರತ ಕೂಡ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲಿ ಎಂಬ ಸಲುವಾಗಿ ಒತ್ತಡ ಹೆಚ್ಚಾಗುತ್ತಿದ್ದು, ಇವತ್ತು ಸಂಸದ ರಾಜೀವ್ ಚಂದ್ರಶೇಖರ್ ಅವರು ಈ ಬಗ್ಗೆ ಖಾಸಗಿ ವಿಧೇಯಕವನ್ನೇ ಮಂಡಿಸಿದರು.

ಉಗ್ರರನ್ನು ಪೋಷಿಸುತ್ತಿರೋ ಪಾಕಿಸ್ತಾನವನ್ನು ಉಗ್ರ ಪೋಷಣೆ ರಾಷ್ಟ್ರ ಎಂದು ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಲೇ ಇದೆ. ಇಂದು ರಾಜ್ಯಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಈ ವಿಚಾರವಾಗಿ ಖಾಸಗಿ ವಿಧೇಯಕವೊಂದನ್ನು ಮಂಡಿಸಿದರು. ಈವರೆಗೆ ಕೇವಲ ಬಾಯಿ ಮಾತು ಒತ್ತಡಕ್ಕೆ ಮೀಸಲಾಗಿದ್ದ ಉಗ್ರರಾಷ್ಟ್ರ ಹಣೆಪಟ್ಟಿ ಇಂದು ಅಧಿೃತವಾಗಿ ಮಂಡನೆಯಾಯಿತು.

ಅಮೆರಿಕ ಹಾಗೂ ಕುವೈತ್ ರಾಷ್ಟ್ರಗಳು ಈಗಾಗಲೇ ಭಯೋತ್ಪಾದಕ ರಾಷ್ಟ್ರಗಳನ್ನು ನಿರ್ಬಂಧಿಸಿವೆ. ಈ ಬೆನ್ನಲ್ಲೇ ರಾಜೀವ್ ಚಂದ್ರಶೇಖರ್ ಅವರು ಮಂಡಿಸಿದ, ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಬಿಲ್ ಮಹತ್ವ ಪಡೆದುಕೊಂಡಿದೆ. ಮುಂಬೈ ದಾಳಿಯಿಂದ ಹಿಡಿದು ಉರಿ ದಾಳಿವರೆಗೆ ಎಲ್ಲ ದಾಳಿಗಳ ಸಂಚು ರೂಪಿಸಿದ್ದು ಪಾಕಿಸ್ತಾನ ಆದರೂ ಕೂಡ ನಾವು ಈವರೆಗೂ ಪಾಕಿಸ್ತಾನಕ್ಕೆ ಮೋಸ್ಟ್ ಫೆವರ್ಡ್ ನೇಷನ್ ಅಂದರೆ ಅತ್ಯಂತ ಹತ್ತಿರದ ರಾಷ್ಟ್ರ ಎಂಬ ದರ್ಜೆಯನ್ನು ನೀಡಿದ್ದೇವೆ. ಈಗ ಇವುಗಳನ್ನು ಪುನರ ವಿಮರ್ಶೆಗೆ ಒಳಪಡಿಸುವ ಕಾಲ ಬಂದಿದೆ ಎಂದು ಹೇಳಿದ್ದಾರೆ. 

ಕ್ರಿಮಿನಲ್ ಹಿನ್ನೆಲೆಯ ಜನರನ್ನು ಸರಿ ದಾರಿಗೆ ತರಬೇಕೆಂದರೆ ಕೇವಲ ಬರಿ ಬಾಯಿ ಮಾತಿನಿಂದ ಅಸಾಧ್ಯ. ಹಾಗೇನೆ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಸಮಯ ಬಂದಿದೆ ಎಂದು ರಾಜೀವ್'ಚಂದ್ರ ಶೇಖೡ ಹೇಳಿದ್ದು ಏಪ್ರಿಲ್ ನಲ್ಲಿ ಮರಳಿ ಖಾಸಗಿ ವಿಧೇಯಕದ ಮೇಲಿನ ಚರ್ಚೆ ಮುಂದುವರೆಯಲಿದೆ.