‘‘ದೇಶಾದ್ಯಂತ ಎಣಿಕೆ ನಡೆಯುತ್ತಿದ್ದು, ಆ ಪ್ರಕ್ರಿಯೆ ಮುಗಿಯದೇ ವಾಪಸಾದ ಮೊತ್ತವನ್ನು ಅಂದಾಜು ಮಾಡಲು ಸಾಧ್ಯವಿಲ್ಲ,’’ ಎಂದು ಹೇಳಿದೆ.

ನವದೆಹಲಿ(ಜ.05): ನೋಟುಗಳ ಅಮಾನ್ಯಗೊಂಡ ಬಳಿಕ ಎಷ್ಟು ಮೊತ್ತ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿದೆ ಎಂಬ ಕುತೂಹಲ ಹೆಚ್ಚಿರುವಂತೆಯೇ, ಆ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ನೋಟುಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ಕೂಡಲೇ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಭಾರತದ ಕೇಂದ್ರ ಬ್ಯಾಂಕ್ ಹೇಳಿದೆ.

‘‘ದೇಶಾದ್ಯಂತ ಎಣಿಕೆ ನಡೆಯುತ್ತಿದ್ದು, ಆ ಪ್ರಕ್ರಿಯೆ ಮುಗಿಯದೇ ವಾಪಸಾದ ಮೊತ್ತವನ್ನು ಅಂದಾಜು ಮಾಡಲು ಸಾಧ್ಯವಿಲ್ಲ,’’ ಎಂದು ಹೇಳಿದೆ.

ನವೆಂಬರ್ 08ರಿಂದ ನೋಟು ಅಮಾನ್ಯವಾದ ಬಳಿಕ ಡಿಸೆಂಬರ್ 10ರಂದು ಆರ್'ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 12.4 ಲಕ್ಷಕೋಟಿ ಬ್ಯಾಂಕಿಗೆ ಬಂದಿದೆ ಎಂದು ಮಾಹಿತಿ ನೀಡಿತ್ತು. ಇದೀಗ ನೋಟು ಬದಲಾವಣೆಗೆ ನೀಡಿದ್ದ ಗಡವು ಮುಗಿದ ಬಳಿಕ ಬ್ಯಾಂಕ್'ಗಳಿಗೆ ಎಷ್ಟು ಹಣ ಮರುಪಾವತಿಯಾಗಿದೆ ಎಂದು ಆರ್'ಬಿಐ ಮಾಹಿತಿ ಬಹಿರಂಗ ಪಡಿಸಿಲ್ಲ.

ಏತನ್ಮಧ್ಯೆ, ಮಧ್ಯಪ್ರದೇಶದ ರೈತರೊಬ್ಬರಿಗೆ ಮಹಾತ್ಮ ಗಾಂಧಿಯ ಭಾವಚಿತ್ರ ಇಲ್ಲದೇ ಇರುವ ₹2 ಸಾವಿರದ ನೋಟು ಸಿಕ್ಕಿದ್ದು, ಅದು ನಕಲಿಯಲ್ಲ, ಮುದ್ರಣದಲ್ಲಾದ ದೋಷ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.