Asianet Suvarna News Asianet Suvarna News

ಆರ್‌ಬಿಐ ಗವರ್ನರ್‌ ರಾಜೀನಾಮೆ ಡೇಟ್ ಫಿಕ್ಸ್ ?

ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ನಡುವಿನ ಕಲಹ ಇದೀಗ ತಾರಕಕ್ಕೆ ಏರಿದ್ದು ಈ ನಿಟ್ಟಿನಲ್ಲಿ ಆರ್ ಬಿಐ ಗವರ್ನರ್ ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. 

RBI governor Urjit Patel could resign on November 19
Author
Bengaluru, First Published Nov 8, 2018, 10:46 AM IST

ನವದೆಹಲಿ: ಕೇಂದ್ರ ಸರ್ಕಾರದ ಜತೆಗಿನ ಜಟಾಪಟಿಯಿಂದ ತೀವ್ರ ಬೇಸರಗೊಂಡಿರುವ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ನ.19ರಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

ಕೇಂದ್ರ ಸರ್ಕಾರದ ಜತೆಗೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟುತೀವ್ರಗೊಂಡರೆ, ನ.19ರಂದು ನಡೆಯಲಿರುವ ಆರ್‌ಬಿಐ ಮುಂದಿನ ಸಭೆಯಲ್ಲೇ ಊರ್ಜಿತ್‌ ಅವರು ತಮ್ಮ ಹುದ್ದೆಗೆ ವಿದಾಯ ಹೇಳುವ ಸಾಧ್ಯತೆ ಇದೆ. 

ಸರ್ಕಾರದ ಜತೆಗಿನ ಹೋರಾಟದಲ್ಲಿ ದಣಿದಿದ್ದು, ಇದು ತಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಕಾರಣ ನೀಡುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳನ್ನು ಉಲ್ಲೇಖಿಸಿ ‘ಮನಿಲೈಫ್‌’ ಎಂಬ ವಿತ್ತ ಸಮಾಚಾರಕ್ಕೆ ಸಂಬಂಧಿಸಿದ ಆನ್‌ಲೈನ್‌ ತಾಣವೊಂದು ವರದಿ ಮಾಡಿದೆ. ಈ ಬಗ್ಗೆ ರಿಸವ್‌ರ್‍ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Follow Us:
Download App:
  • android
  • ios