ನೋಟ್​ ಬ್ಯಾನ್​ ಬಳಿಕ 2000, 500 ನೋಟ್​ಗಳು ಆರ್​ಬಿಐ ಮುದ್ರಿಸಿತ್ತು. ಇದೇ ಮೊದಲ ಬಾರಿಗೆ ಆರ್​ಬಿಐ 200 ನೋಟ್​ ಮುದ್ರಿಸಲು ಪ್ಲಾನ್​ ಮಾಡಿಕೊಂಡಿದ್ದು, ಈ ಕುರಿತಾದ ಅಂತಿಮ ನಿರ್ಧಾರವನ್ನೂ ಕೈಗೊಂಡಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ನವದೆಹಲಿ(ಎ.04): ನೋಟ್​ ಬ್ಯಾನ್​ ಬಳಿಕ 2000, 500 ನೋಟ್​ಗಳು ಆರ್​ಬಿಐ ಮುದ್ರಿಸಿತ್ತು. ಇದೇ ಮೊದಲ ಬಾರಿಗೆ ಆರ್​ಬಿಐ 200 ನೋಟ್​ ಮುದ್ರಿಸಲು ಪ್ಲಾನ್​ ಮಾಡಿಕೊಂಡಿದ್ದು, ಈ ಕುರಿತಾದ ಅಂತಿಮ ನಿರ್ಧಾರವನ್ನೂ ಕೈಗೊಂಡಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಜೂನ್'​ನಿಂದ 200 ರೂಪಾಯಿ ನೋಟ್​ ಚಲಾವಣೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆರ್​ಬಿಐ ಕಳೆದ ತಿಂಗಳು ನಡೆದ ಸಭೆಯಲ್ಲೇ 200 ರೂಪಾಯಿ ನೋಟ್​​ ಮುದ್ರಿಸುವ ಬಗ್ಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಂಡಿದೆ. 200 ನೋಟ್​​ ಮುದ್ರಿಸಲು ಇನ್ನು ಸರ್ಕಾರ ಅಧಿಕೃತ ಒಪ್ಪಿಗೆ ನೀಡುವುದಷ್ಟೇ ಬಾಕಿ ಇದೆ. ಸರ್ಕಾರದ ಒಪ್ಪಿಗೆ ಕೂಡಲೇ ಜೂನ್​'ನಲ್ಲಿ ನೋಟ್​ಗಳ ಮುದ್ರಣ ಪ್ರಕ್ರಿಯೆಗೆ ಚಾಲನೆ ಸಿಗಲಿದೆಯಂತೆ.