ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ವಿಸ್ವನಾಥ ಎಸ್‌ಆರ್ ಸೇರಿದಂತೆ ಹಲವರು ಗುಂಪಾಗಿ ಕಾರ್ಯಕಾಪರಿಣಿಯಲ್ಲಿ ಯಡಿಯೂರಪ್ಪ ಪರ ಘೋಷಣೆಗಳನ್ನು ಕೂಗುತ್ತ ಬ್ರಿಗೇಡ್‌ನಿಂದ ಬಿಜೆಪಿಯಲ್ಲಿ ವಿನಾಕಾರಣ ಗೊಂದಲ ಹುಟ್ಟುಹಾಕುವವರಿಗೆ ಪಾಠ ಕಲಿಸಿರಿ, ಬಿಸಿ ಮುಟ್ಟಿಸಿರಿ ಎಂದು ಪಕ್ಷದ ಹಿರಿಯ ನಾಯಕರುಗಳನ್ನು ಆಗ್ರಹಿಸಿದ್ದಾರೆ.

ಕಲಬುರಗಿ (ಜ.21): ಇಲ್ಲಿ ಸೇರಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮೊದಲ ದಿನವೇ ರಾಯಣ್ಣ ಬ್ರಿಗೇಡ್ ಬೇಗುದಿ ಸ್ಫೋಟಗೊಂಡಿದೆ.

ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ವಿಸ್ವನಾಥ ಎಸ್‌ಆರ್ ಸೇರಿದಂತೆ ಹಲವರು ಗುಂಪಾಗಿ ಕಾರ್ಯಕಾಪರಿಣಿಯಲ್ಲಿ ಯಡಿಯೂರಪ್ಪ ಪರ ಘೋಷಣೆಗಳನ್ನು ಕೂಗುತ್ತ ಬ್ರಿಗೇಡ್‌ನಿಂದ ಬಿಜೆಪಿಯಲ್ಲಿ ವಿನಾಕಾರಣ ಗೊಂದಲ ಹುಟ್ಟುಹಾಕುವವರಿಗೆ ಪಾಠ ಕಲಿಸಿರಿ, ಬಿಸಿ ಮುಟ್ಟಿಸಿರಿ ಎಂದು ಪಕ್ಷದ ಹಿರಿಯ ನಾಯಕರುಗಳನ್ನು ಆಗ್ರಹಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಭೋಜನ ನಂತರದ ಅಪರಾಹ್ನದ ಗೋಷ್ಠಿಗಳು ಶುರುವಾಗುವ ಮುನ್ನವೇ ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ವಿಶ್ವನಾಥ ಸೇರಿದಂತೆ ೧೦ರಿಂದ ೧೫ ಜನರಿದ್ದ ಶಾಸಕರು, ಮುಖಂಡರ ಗುಂಪು ತಮ್ಮ ಆಸನಗಳನ್ನೆಲ್ಲ ಬಿಟ್ಟೆದ್ದು ಸಭಾಂಗಣದ ಮುಂಭಾಗಕ್ಕೆ ಹೋಗಿ ಯಡಿಯೂರಪ್ಪ ಪರ ಘೋಷಣೆ ಹಾಕುತ್ತಲೇ ಬ್ರಿಗೇಡ್ ಸಂಘಟನೆ ಮಾಡುತ್ತೇವೆಂದು ಹೊರಟು ವಿನಾಕಾರಣ ಬಿಜೆಪಿಯಲ್ಲಿ ಗೊಂದಲ ಹುಟ್ಟುಹಾಕುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಕಾರ್ಯಕರ್ತರಿಂದ ಧಿಕ್ಕಾರ: 

ಕಾರ್ಯಕಾರಿಣಿಯಲ್ಲಿ ಈ ಬೆಳವಣಿಗೆ ಗೊಂದಲ ಹುಟ್ಟು ಹಾಕಿದಾಗ ವೇದಿಕೆ ಮುಂಭಾಗಕ್ಕೆ ಬಂದು ಗುಂಪು ಸೇರಿದ್ದ ಶಾಸಕರು, ಪ್ರಮುಖರು ಒಕ್ಕೊರಲಿನಿಂದ ಈಶ್ವರಪ್ಪ ಮೊದಲ್ಗೊಂಡು ಅನೇಕರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದ್ದಾರೆ. ಈ ಹಂತದಲ್ಲಿ ವೇದಿಕೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್, ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ ಕುಮಾರ್, ರಮೇಶ ಜಿಗಜಣಗಿ, ಸದಾನಂದಗೌಡ, ಪ್ರಲ್ಹಾದ ಜೋಷಿ, ಸಿಟಿ ರವಿ, ಶೋಭಾ ಕರಂದಲಾಜೆ ಸೇರಿದಂತೆ ಪಕ್ಷದ ಪ್ರಮುಖರು ಅನೇಕರು ಹಾಜರಿದ್ದರು.

ಸಭೆಯಲ್ಲಿನ ಏಕಾಏಕಿ ಗೊಂದಲ ಕಂಡು ತಕ್ಷಣ ಎದ್ದುಹೋಗಿ ಘೋಷಣೆ ಹಾಕುವವರನ್ನು ಶಾಂತರಾಗುವಂತೆ ಕೋರಿಕೊಂಡ ಮುರಳೀಧರರಾವ್ ಪಕ್ಷ ಸಂಘಟನೆಗೆ ಏನೆಲ್ಲಾ ಸಲಹೆಗಳಿವೆಯೋ ಅವುಗಳನ್ನು ತಮ್ಮ ಮುಂದೆ ಹೇಳುವಂತೆ ಕಾರ್ಯಕಾರಿಣಿ ನಡೆಯುವಾಗಲೇ ತಾವು ಮಧ್ಯದಿಂದ ಎದ್ದು ಹೋಗಿ ಪ್ರತ್ಯೇಕ ಕೋಣೆಯಲ್ಲಿ ಕುಳಿತುು ಘೋಷಣೆ ಹಾಕಿದ್ದ ಮುಖಂಡರೆಲ್ಲರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸದರು ಎಂದು ತಿಳಿದು ಬಂದಿದೆ.

ಸಭೆಯಲ್ಲೇ ಬ್ರಿಗೆಡ್ ಗೊಂದಲ ಹ್ಟುಟುಹಾಕಿದೆ, ಪಕ್ಷದ ಹಿರಿಯರೇ ಅಲ್ಲಿದ್ದಾರೆ ಎಂದೆಲ್ಲ ಖಡಕ್ಕಾಗಿ ವಿಷಯ ಪ್ರಸ್ತಾಪಿಸಿ ಅನೇಕರು ಘೋಷಣೆ ಹಾಕುತ್ತ ಅಸಮಾಧಾನ ಹೊರಹಾಕಿದ್ದ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಹಿರಿಯ ನಾಯಕರೆಲ್ಲರೂ ಮೌನವಾಗಿದ್ದರು. ಯಾರೂ ಆ ಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ. ಮುರಲೀಧರರಾವ್ ಅವರೇ ಘೋಷಣೆ ಹಾಕುವವರನ್ನು ಸಮಾಧಾನಪಡಿಸಲು ಮುಂದಾದರು.