ರವೀಂದ್ರ ಜಡೇಜಾ ತಮ್ಮ ಪತ್ನಿ ರೇವಾ ಸೋಲಂಕಿ ಜೊತೆ ಕಾರಿನಲ್ಲಿ ತೆರಳುತ್ತಿದ್ದರು.

ಭಾರತದ ಕ್ರಿಕೆಟ್ ತಂಡದ ಆಲ್'ರೌಂಡರ್ ಆಟಗಾರ ರವೀಂದ್ರ ಜಡೇಜಾ ಚಲಾಯುಸುತ್ತಿದ್ದ ಕಾರಿಗೆ ಸಿಲುಕಿ ಯುವತಿಯೊಬ್ಬಳು ಗಾಯಗೊಂಡ ಘಟನೆ ಗುಜರಾತಿನ ಜಾಮ್ನನಗರ್' ಜಿಲ್ಲೆಯಲ್ಲಿ ನಡೆದಿದೆ.

ರವೀಂದ್ರ ಜಡೇಜಾ ತಮ್ಮ ಪತ್ನಿ ರೇವಾ ಸೋಲಂಕಿ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಇವರ ಕಾರು ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಿದ್ದ ಪ್ರೀತಿ ಶರ್ಮಾ ಎಂಬ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಜಡೇಜಾ ಅವರೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಯುವತಿ ಚೇತರಿಸಿಕೊಂಡಿದ್ದಾಳೆ. ಅಪಘಾತಕ್ಕೆ ರವೀಂದ್ರ ಜಡೇಜಾ ಅವರು ಕಾರಣರಲ್ಲ ಎಂಬುದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.