ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿ ಸದ್ಯಕ್ಕೆ ಆಸ್ಪತ್ರೆಪಾಲಾಗಿರುವ ರವಿ ಬೆಳಗೆರೆಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಬೆಂಗಳೂರು (ಡಿ.16): ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿ ಸದ್ಯಕ್ಕೆ ಆಸ್ಪತ್ರೆಪಾಲಾಗಿರುವ ರವಿ ಬೆಳಗೆರೆಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ಜಾಮೀನು ಸಿಗುವ ಬಹುತೇಕ ಸಾಧ್ಯತೆಯಿದೆ. ಇನ್ನು ಈಗಾಗಲೇ ಸಿಟಿ ಸಿವಿಲ್ ಕೋರ್ಟ್ ರವಿ ಬೆಳಗೆರೆಗೆ ಜಾಮೀನನ್ನು ನೀಡಿ ಮಧ್ಯಂತರ ಆದೇಶವನ್ನು ಹೊರಡಿಸಿತ್ತು. ಡಿ.12 ರಂದು ಮಧ್ಯಂತರ ಜಾಮೀನು ನೀಡಿದ್ದು ಇಂದಿಗೆ ಅವಧಿ ಮುಕ್ತಾಯವಾಗಲಿದ್ದು ಮತ್ತೆ ವಿಚಾರಣೆ ನಡೆಸಲಿದೆ.. ಇನ್ನು ರವಿ ಬೆಳಗೆರೆ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದ್ದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ.. ನಿನ್ನೆ ರಾತ್ರಿ ರವಿಬೆಳಗೆರೆಯ ಮೊದಲ ಪತ್ನಿ ಲಲಿತಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಸಿದ್ದು ಇನ್ನೂ ಮೂರು ದಿನಗಳ ಕಾಲ ರವಿ ಜಯದೇವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.
