ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಧಾನಸಭಾದಲ್ಲಿಂದು ರತ್ನಪ್ರಭಾ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರು (ನ.30): ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಧಾನಸಭಾದಲ್ಲಿಂದು ರತ್ನಪ್ರಭಾ ಅಧಿಕಾರ ಸ್ವೀಕರಿಸಿದ್ದಾರೆ.

ಸುಭಾಷ್​ ಕುಂಟಿಯಾ ಅವರ ಅಧಿಕಾರಾವಧಿ ಇಂದು ಮುಕ್ತಾಯಗೊಂಡಿದ್ದು, ರತ್ನಪ್ರಭಾ ಸಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಜನರ ಪ್ರೀತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ.  ಬೀದರ್, ರಾಯಚೂರು, ಗುಲ್ಬರ್ಗಾ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ.  ಹೆಮ್ಮೆಪಡುವಂತಹ ಜವಾಬ್ದಾರಿ ದೊರೆತಿದೆ.  ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಆಡಳಿತ ನಡೆಸುವುದು ನನ್ನ  ಆದ್ಯತೆ.  ಆಡಳಿತದಲ್ಲಿ ಬದಲಾವಣೆ ತರುವುದು ನನ್ನ ಉದ್ದೇಶ.  ಜನರ ನಿರೀಕ್ಷೆಯ ಮಟ್ಟ ಮುಟ್ಟುವುದು ನನ್ನ ಉದ್ದೇಶ. ನಾನು ಯಾವಾಗಲೂ ಭಾವುಕ ಮಹಿಳೆ.  ಇಂದು ಜನರು ತೋರಿದ ಪ್ರೀತಿ ನನ್ನನ್ನು ಭಾವುಕಳನ್ನಾಗಿಸಿದೆ ಎಂದು ರತ್ನಪ್ರಭಾ ಅಧಿಕಾರ ಸ್ವೀಕರಿಸಿದ ಬಳಿಕ ಹೇಳಿದ್ದಾರೆ.