ಪಡಿತರ ಮಳಿಗೆಗಳಲ್ಲಿ ಸಮರ್ಪಕವಾಗಿ ಆಹಾರ ಧಾನ್ಯವಿತರಿಸುವುದಿಲ್ಲ, ನೈಜ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಮಹತ್ವದ ನಿರ್ಧಾರ ಕೈಗೊಂಡಿರುವ ತೆಲಂಗಾಣ ಸರ್ಕಾರ ಪಡಿತರವನ್ನು ಫಲಾನುಭವಿಗಳು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯಬಹುದಾದ ಸೌಲಭ್ಯವನ್ನುಏ.1ರಿಂದ ಜಾರಿಗೊಳಿಸಿದೆ.
ಹೈದರಾಬಾದ್: ಪಡಿತರ ಮಳಿಗೆಗಳಲ್ಲಿ ಸಮರ್ಪಕವಾಗಿ ಆಹಾರ ಧಾನ್ಯವಿತರಿಸುವುದಿಲ್ಲ, ನೈಜ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಮಹತ್ವದ ನಿರ್ಧಾರ ಕೈಗೊಂಡಿರುವ ತೆಲಂಗಾಣ ಸರ್ಕಾರ ಪಡಿತರವನ್ನು ಫಲಾನುಭವಿಗಳು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯಬಹುದಾದ ಸೌಲಭ್ಯವನ್ನುಏ.1ರಿಂದ ಜಾರಿಗೊಳಿಸಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 1,545 ಅಂಗಡಿಗಳಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ರಾಜ್ಯದೆಲ್ಲೆಡೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
2.75 ಕೋಟಿ ಫಲಾನುಭವಿಗಳು ಪಡಿತರ ಪೋರ್ಟಬಿಲಿಟಿಯ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ. ಹೊಸ ಪೋರ್ಟಬಿಲಿಟಿ ಯೋಜನೆಯ ಪ್ರಕಾರ, ಫಲಾನುಭವಿಗಳು ತಮ್ಮ ಮನೆಯ ಸಮೀಪದ ಅಂಗಡಿಯಿಂದ ಅಥವಾ ಲಭ್ಯವಿರುವ ಯಾವುದೇ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ.
ಅಲ್ಲದೇ ಒಂದು ವೇಳೆ ಫಲಾನುಭವಿಗಳು ಬೇರೆ ಪ್ರದೇಶಕ್ಕೆ ಹೋದರೂ ರೇಷನ್ ಕಾರ್ಡ್‌ನ ವಿಳಾಸವನ್ನು ಬದಲಿಸಬೇಕಾಗಿಲ್ಲ. ವಲಸೆ ಕಾರ್ಮಿಕರು ತಾವಿರುವ ಸ್ಥಳದಲ್ಲೇ ಪಡಿತರ ಪಡೆದುಕೊಳ್ಳಬಹುದಾಗಿದೆ. ಮನೆಯ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ಇದ್ದರೆ ಪ್ರತ್ಯೇಕವಾಗಿ ತಮ್ಮ ಪಾಲಿನ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ. ಟಿ ರೇಷನ್ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಸಮೀಪದ ನ್ಯಾಯಬೆಲೆ ಅಂಗಡಿಯ ಸ್ಥಳವನ್ನು ಪಡೆಕೊಳ್ಳಬಹುದಾಗಿದೆ.
