ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರು, ಆರು ತಿಂಗಳಲ್ಲಿ ಇಲಾಖೆಯಿಂದ ಎಷ್ಟು ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದು ಪ್ರಶ್ನಿಸಿ, ಹೊಸ ಸರ್ಕಾರಗಳು ಬಂದಾಗ ಜನಸಾಮಾನ್ಯರ ಮೇಲೆ ಪ್ರಯೋಗ ನಡೆಸುವಂತೆ ಪಡಿತರ ಚೀಟಿಗಳನ್ನು ಬದಲಾಯಿಸಲಾಗುತ್ತದೆ ಎಂದರು.

ವಿಧಾನ ಪರಿಷತ್(ನ.22): ಗ್ರಾಮ ಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ನಿಮ್ಮ ಮನೆ ಬಾಗಿಲಿಗೆ ಅಂಚೆ ಮೂಲಕ ಪಡಿತರ ಚೀಟಿ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರು, ಆರು ತಿಂಗಳಲ್ಲಿ ಇಲಾಖೆಯಿಂದ ಎಷ್ಟು ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದು ಪ್ರಶ್ನಿಸಿ, ಹೊಸ ಸರ್ಕಾರಗಳು ಬಂದಾಗ ಜನಸಾಮಾನ್ಯರ ಮೇಲೆ ಪ್ರಯೋಗ ನಡೆಸುವಂತೆ ಪಡಿತರ ಚೀಟಿಗಳನ್ನು ಬದಲಾಯಿಸಲಾಗುತ್ತದೆ ಎಂದರು.

ಇದಕ್ಕೆ ಸಚಿವ ಖಾದರ್ ಉತ್ತರಿಸಿ, ಬೇರೆ ಬೇರೆ ಕಾಯ್ದೆ ಅನ್ವಯ ಸುತ್ತೋಲೆಗಳನ್ನು ಹೊರಡಿಸಬೇಕಾಗುತ್ತಿದೆ. ಈ ಮೊದಲು ಪಡಿತರ ಚೀಟಿಗೆ 14 ಅಂಶಗಳನ್ನು ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆ ಕೇವಲ ಅರ್ಜಿ ಕೊಟ್ಟರೆ ಸಾಕು. ಆಧಾರ್ ಕಾರ್ಡ್ ಬಿಟ್ಟರೆ ಬೇರೆ ಯಾವ ದಾಖಲೆಯ ಅಗತ್ಯವಿಲ್ಲ. ಮನೆ ಬಾಗಿಲಿಗೆ ಪಡಿತರ ಚೀಟಿ ತಲುಪಿಸಲಾಗುವುದು ಎಂದರು.