ಟಾಟಾ ಸನ್ಸ್ ಅಧ್ಯಕ್ಷಸ್ಥಾನದಿಂದ ಮಿಸಿ ಅವರನ್ನು ಕಿತ್ತೊಗೆದ ನಂತರ ನಡೆಯುತ್ತಿರುವ ಆರೋಪ ಪ್ರತ್ಯಾರೋಪ ಸಮರ ಈಗ ಹೊಸ ಮಜಲುಮುಟ್ಟಿದೆ. ರತನ್ ಅವರ ನಿರ್ಧಾರದಿಂದ ಟಿಸಿಎಸ್ ಮರಣಶಯ್ಯೆ ಸಮೀಪಿಸಿದ ಅನುಭವ ಟಿಸಿಎಸ್‌ಗಾಗಿದೆ ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ.
ಮುಂಬೈ(ನ.23): ಟಾಟಾ ಸಮೂಹದ ನಗದು ಕರೆಯುವ ಕಾಮದೇನು ಎಂದೇ ಹೆಸರಾಗಿರುವ ಟಿಸಿಎಸ್ ಕಂಪನಿಯನ್ನು ರತನ್ ಟಾಟಾ ಐಬಿಎಂಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬ ಹೊಸ ಬಾಂಬನ್ನು ಸೈರಸ್ ಮಿಸ್ತ್ರಿ ಸಿಡಿಸಿದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷಸ್ಥಾನದಿಂದ ಮಿಸಿ ಅವರನ್ನು ಕಿತ್ತೊಗೆದ ನಂತರ ನಡೆಯುತ್ತಿರುವ ಆರೋಪ ಪ್ರತ್ಯಾರೋಪ ಸಮರ ಈಗ ಹೊಸ ಮಜಲುಮುಟ್ಟಿದೆ. ರತನ್ ಅವರ ನಿರ್ಧಾರದಿಂದ ಟಿಸಿಎಸ್ ಮರಣಶಯ್ಯೆ ಸಮೀಪಿಸಿದ ಅನುಭವ ಟಿಸಿಎಸ್ಗಾಗಿದೆ ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ. ಟಾಟಾ ಅವರ ಅಹಂ ನಿಂದಾಗಿ ಕೊರಸ್ ಕಂಪನಿಯನ್ನು ಹೆಚ್ಚಿನ ದರಕ್ಕೆ ಖರೀದಿಸಲಾಯಿತು. ಬೋರ್ಡ್ ಸದಸ್ಯರು ಮತ್ತು ಹಿರಿಯ ಅಕಾರಿಗಳು 12 ಬಿಲಿಯನ್ಗೆ ಕೋರಸ್ ಕಂಪನಿ ಖರೀದಿಸುವುದಕ್ಕೆ ವಿರೋಸಿದ್ದರು. ಆದರೂ ಟಾಟಾ ತಮ್ಮ ಅಹಂನಿಂದಾಗಿ ಹೆಚ್ಚಿನ ದರ ನೀಡಿ ಖರೀದಿಸಿದರು ಎಂದು ಹೇಳಿದ್ದಾರೆ. ಟಾಟಾ ಸಮೂಹದಲ್ಲಿ ಟಿಸಿಎಸ್ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಮತ್ತು ಹೆಚ್ಚು ಲಾಭ ತರುತ್ತಿರುವ ಕಂಪನಿ. ಅದನ್ನೇ ಟಾಟಾ ಮಾರಾಟಕ್ಕೆ ಮುಂದಾಗಿದ್ದರು ಎಂದು ಆರೋಪಿಸುವ ಮೂಲಕ ಮಿಸ್ತ್ರಿ ರತನ್ ಟಾಟಾ ಅವರಿಗೆ ದೊಡ್ಡ ಪೆಟ್ಟು ನೀಡಿದ್ದಾರೆ.
