Asianet Suvarna News Asianet Suvarna News

ಸೂರ್ಯನಿಗೆ ಬಣ್ಣದುಂಗುರ, ಶಿವಮೊಗ್ಗದ ಖಗೋಳ ವಿಸ್ಮಯಕ್ಕೆ ಕಾರಣವೇನು?

ಶಿವಮೊಗ್ಗದ ಆಗಸ ಸೃಷ್ಟಿ ವೈಚಿತ್ರ್ಯವೊಂದಕ್ಕೆ ಸಾಕ್ಷಿಯಾಯಿತು. ಇಂದು ಮಧ್ಯಾಹ್ನ 12 ರಿಂದ 1 ಗಂಟೆ ನಡುವಿನ ಅವಧಿಯಲ್ಲಿ ಸೂರ್ಯನ ಸುತ್ತ ವೃತ್ತಾಕಾರವೊಂದು ನಿರ್ಮಾಣವಾಗಿತ್ತು. ಇದನ್ನು ಕಂಡ ನಾಗರಿಕರು ಫೋಟೋ ಸೆರೆಹಿಡಿದು ಸಂಭ್ರಮಿಸಿದ್ದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.

Rare 22 degree circular Solar halo spotted in Shimoga Karnataka
Author
Bengaluru, First Published Sep 24, 2018, 3:11 PM IST

ಶಿವಮೊಗ್ಗ(ಸೆ.24)  ಶಿವಮೊಗ್ಗದಲ್ಲಿ ಇಂದು ನಡು ಮಧ್ಯಾಹ್ನ ಸೂರ್ಯನೇ ಬಣ್ಣದ ಛತ್ರಿ ಹಿಡಿದು ನಿಂತಿದ್ದ. ಸೂರ್ಯಂಗೆ ಟಾರ್ಚಾ! ಎಂದು ಮಾತಿನಲ್ಲಿ ಬಳಸುವುದುಂಟು. ಇಲ್ಲಿ ಸೂರ್ಯಂಗೆ  ಉಂಗುರಾನಾ?  ಎಂದು ಕೇಳಬೇಕಾಗಿದೆ.

ವೈಜ್ಞಾನಿಕವಾಗಿ ಇದನ್ನು  ಸೋಲಾರ್ ಹ್ಯಾಲೋ (Solar Halo, To be precise, 22° Halo) ಎಂದು ಕರೆಯಲಾಗುತ್ತದೆ. ಸೂರ್ಯ ಕಿರಣಗಳು ಭೂಮಿಗೆ ಮೋಡಗಳನ್ನು ಹಾದು ಬರುವ ಮುನ್ನ ಈ ರೀತಿಯ ಏಳು ಬಣ್ಣದ ವೃತ್ತಾಕಾರದ ಉಂಗುರ ನಿರ್ಮಾಣವಾಗಬಲ್ಲದು.

ಭೂಮಿಯಿಂದ 20 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ (ಟ್ರೊಫೋಸ್ಫಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ತೀಕರಣವಾಗಿ ಮಂಜಿನ ಹರಳುಗಳಾಗಿರುತ್ತವೆ. ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿ ಬೆಳಕು ಹಲವು ಸಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆ ಉಂಟಾಗುತ್ತದೆ. ಇದರ ಪರಿಣಾಮ ಸೂರ್ಯನ ಸುತ್ತ22 ಡಿಗ್ರಿ ವೃತ್ತಾಕಾರದಲ್ಲಿ ಈ ಬಗೆಯ ಕಾಮನ ಬಿಲ್ಲುಗಳು ಉಂಟಾಗುತ್ತವೆ ಎಂದು ಖಗೋಳ ವಿಜ್ಞಾನಿ ಹರೋನಹಳ್ಳಿ ಸ್ವಾಮಿ ಹೇಳುತ್ತಾರೆ.

"

Follow Us:
Download App:
  • android
  • ios