ಕೊನೆಗೂ ಅಂತ್ಯ ಕಂಡ ರಾಜಕೀಯ ಸಂಘರ್ಷ| ಹೊಸ ಪ್ರಧಾನಿ ಆಯ್ಕೆಯಿಂದ ಕೊನೆಗೊಂಡ ಸಂಘರ್ಷ| ಶ್ರೀಲಂಕಾ ನೂತನ ಪ್ರಧಾನಿಯಾಗಿ ರನೀಲ್ ವಿಕ್ರಮಸಿಂಘೆ ಆಯ್ಕೆ| ಕೆಲ ದಿನಗಳ ಹಿಂದೆಯಷ್ಟೇ ಉಚ್ಛಾಟನೆಗೊಂಡಿದ್ದ ವಿಕ್ರಮಸಿಂಘೆ|ಮತ್ತೆ ಪ್ರಧಾನಿಯಾಗಿ ನೇಮಕಗೊಂಡ ರನಿಲ್ ವಿಕ್ರಮಸಿಂಘೆ|
ಕೊಲಂಬೋ(ಡಿ.16): ಶ್ರೀಲಂಕಾದ ಯುನೈಟೆಡ್ ನ್ಯಾಷನಲ್ ಪಾರ್ಟಿ ಅಧ್ಯಕ್ಷ ರನೀಲ್ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೇರಿದ್ದಾರೆ.
ವಿಕ್ರಮಸಿಂಘೆ ಇಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದ 51 ದಿನಗಳ ಕಾಲ ನಡೆಯುತ್ತಿದ್ದ ರಾಜಕೀಯ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ವಿಕ್ರಮಸಿಂಘೆ ಅವರಿಗೆ ಇಂದು ಪ್ರಮಾಣವಚನ ಬೋಧಿಸಿದ್ದಾರೆ.
ಕಳೆದ ಅಕ್ಟೋಬರ್ 26ರಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ, ಪ್ರಧಾನಿ ಹುದ್ದೆಯಿಂದ ಉಚ್ಚಾಟಿತರಾಗಿದ್ದ ವಿಕ್ರಮಸಿಂಘೆ ಇಂದು ಮತ್ತೆ ಅಧಿಕಾರ ಸ್ವೀಕರಿಸಿದರು.
ವಿಕ್ರಮಸಿಂಘೆ ಉಚ್ಚಾಟನಾ ಪ್ರಕ್ರಿಯೆ ದ್ವೀಪರಾಷ್ಟ್ರದ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಲ್ಲದೆ ಸಂವಿಧಾನಿಕ ಬಿಕ್ಕಟ್ಟಿಗೆ ಕೂಡ ಕಾರಣವಾಗಿತ್ತು.

ವಿಕ್ರಮಸಿಂಘೆ ಉಚ್ಚಾಟನೆ ಬಳಿಕ ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸೆ, ಶ್ರೀಲಂಕಾ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ತಮ್ಮ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು.
