ನಟಿಯೊಂದಿಗೆ ರಣಜಿ ಕ್ರಿಕೆಟಿಗನ ನಿಶ್ಚಿತಾರ್ಥ

news | Thursday, May 17th, 2018
Sayed Isthiyakh
Highlights
 • ರಣಜಿ ಕ್ರಿಕೆಟಿಗ ಹಾಗೂ ಬಿಗ್’ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ, ಗೆಳತಿ ನಟಿ ಮಾಳೇಟಿರ ಅನು ಅವರೊಂದಿಗೆ ನಿಶ್ಚಿತಾರ್ಥ
 • ಕನ್ನಡದ ಕರ್ವ, ಲೈಫ್ ಸೂಪರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಮಾಳೇಟಿರ

 

ಬೆಂಗಳೂರು[ಮೇ.17]: ಕರ್ನಾಟಕ ರಣಜಿ ಕ್ರಿಕೆಟಿಗ ಹಾಗೂ ಬಿಗ್’ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ, ಗೆಳತಿ ನಟಿ ಮಾಳೇಟಿರ ಅನು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಲ್ಲಿನ ವಸಂತನಗರದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿದೆ.

ಕನ್ನಡದ ಕರ್ವ, ಲೈಫ್ ಸೂಪರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಮಾಳೇಟಿರ ಅನು ಅವರನ್ನು ಅಯ್ಯಪ್ಪ ವರಿಸಲಿದ್ದಾರೆ.

ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

Comments 0
Add Comment

  Related Posts

  Sudeep Shivanna Cricket pratice

  video | Saturday, April 7th, 2018

  Gossip About Virushka

  video | Thursday, February 8th, 2018

  All Time ODI All Round XI

  video | Saturday, January 20th, 2018

  Sudeep Shivanna Cricket pratice

  video | Saturday, April 7th, 2018
  Sayed Isthiyakh