ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಿ ನೆರಳು ಮತ್ತೊಮ್ಮೆ ಬಯಲಾಗಿದೆ. ಹುಬ್ಬಳ್ಳಿ ಯಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಬೆಟ್ಟಿಂಗ್ ಜಾಲ ಪತ್ತೆಯಾಗಿದೆ.
ಹುಬ್ಬಳ್ಳಿ(ಸೆ.16): ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಿ ನೆರಳು ಮತ್ತೊಮ್ಮೆ ಬಯಲಾಗಿದೆ. ಹುಬ್ಬಳ್ಳಿ ಯಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಬೆಟ್ಟಿಂಗ್ ಜಾಲ ಪತ್ತೆಯಾಗಿದೆ.
ರಾಜನಗರದ ಕೆಎಸ್'ಸಿಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯದ ವೇಳೆ ಇಬ್ಬರು ಬುಕ್ಕಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬುಕ್ಕಿಗಳು ತಂಗಿದ್ದ ಖಾಸಗಿ ಹೋಟೆಲ್ ಮೇಲು ಸಹ ಪೊಲೀಸರು ದಾಳಿ ಮಾಡಿದ್ದಾರೆ. ಮಧ್ಯಪ್ರದೇಶದ ರಣಜಿ ಕ್ರಿಕೆಟಿಗ ರೋಹಿತ್ ಶ್ರೀವಾತ್ಸವ್ ಹಾಗೂ ಬೆಂಗಳೂರು ಮೂಲದ ಅಭಿಷೇಕ್ ಬಂಧಿತ ಬುಕ್ಕಿಗಳು.
ರೋಹಿತ್ ಹಾಗೂ ಅಭಿಷೇಕ್ ಕಳೆದ 2 ದಿನಗಳಿಂದ ಹುಬ್ಬಳ್ಳಿಯ ನವೀನ್ ಹೋಟೆಲ್ನ ರೂಮ್ ನಂಬರ್ 101ರಲ್ಲಿ ತಂಗಿದ್ದರು. ಮೈದಾನದಲ್ಲಿಯೇ ಕುಳಿತು, ಮಧ್ಯಪ್ರದೇಶಕ್ಕೆ ಪೋನ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಬಂಧಿತ ಆರೋಪಿಗಳಿಂದ ನಾಲ್ಕು ಮೊಬೈಲ್, 20 ಸಾವಿರ ನಗದು ಜಪ್ತಿ ಮಾಡಲಾಗಿದೆ. ಆಶೋಕನಗರ ಹಾಗೂ ವಿದ್ಯಾನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
