ಸೋಶಿಯಲ್ ಮೀಡಿಯಾ ಹೊಣೆ ರಮ್ಯಾಗೆ

ನವದೆಹಲಿ: ಮಾಜಿ ಸಂಸದೆ ರಮ್ಯಾ ಅವರಿಗೆ ಎಐಸಿಸಿಯ ಸಾಮಾಜಿಕ ಮಾಧ್ಯಮ ನಿರ್ವಹಣೆಯ ಉಸ್ತುವಾರಿ ಹೊಣೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಚಲನಚಿತ್ರ ನಟಿಯೂ ಆಗಿರುವ ಮಂಡ್ಯದ ಮಾಜಿ ಸಂಸದೆ ರಮ್ಯಾ, ಎಐಸಿಸಿಯ ಟ್ವೀಟರ್‌, ಫೇಸ್‌ಬುಕ್‌ ಮುಂತಾದ ಅಂತರ್ಜಾಲ ತಾಣಗಳ ನಿರ್ವಹಣೆ ಮಾಡಲಿದ್ದಾರೆ.