ರಿಪೋರ್ಟ್ ಕಾರ್ಡ್'ನಲ್ಲಿ ಉದ್ಯೋಗಕ್ಕೆ 'ಡಿ' ಗ್ರೇಡ್, ರಕ್ಷಣೆಗೆ 'ಸಿ' ಗ್ರೇಡ್, ಆರೋಗ್ಯ ಕ್ಷೇತ್ರಕ್ಕೆ 'ಎಫ್', ಆರ್ಥಿಕತೆಗೆ 'ಎಫ್', ಮಹಿಳಾ ಸುರಕ್ಷತೆ 'ಸಿ' ಗ್ರೇಡ್ ನೀಡಲಾಗಿದ್ದು, ಕಥೆ ಹೇಳುವ ವಿಚಾರದಲ್ಲಿ ಮೋದಿಗೆ 'ಎ++' ಗ್ರೇಡ್ ಸಿಕ್ಕಿದೆ.

ಬೆಂಗಳೂರು(ಮಾ.23): ಮಾಜಿ ಸಂಸದೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಾಲೆಳೆದಿದ್ದಾರೆ.

ಹೌದು, ಬ್ರೇಕಿಂಗ್ ನ್ಯೂಸ್: ನರೇಂದ್ರ ಮೋದಿ ಕಳೆದುಕೊಂಡಿದ್ದ ಮಾರ್ಕ್ಸ್ ಕಾರ್ಡ್ ಸಿಕ್ಕಿದೆ ಎಂದು ರಿಪೋರ್ಟ್ ಕಾರ್ಡ್'ವೊಂದನ್ನು ರಮ್ಯಾ ಟ್ವೀಟ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಿಪೋರ್ಟ್ ಕಾರ್ಡ್'ನಲ್ಲಿ ಉದ್ಯೋಗಕ್ಕೆ 'ಡಿ' ಗ್ರೇಡ್, ರಕ್ಷಣೆಗೆ 'ಸಿ' ಗ್ರೇಡ್, ಆರೋಗ್ಯ ಕ್ಷೇತ್ರಕ್ಕೆ 'ಎಫ್', ಆರ್ಥಿಕತೆಗೆ 'ಎಫ್', ಮಹಿಳಾ ಸುರಕ್ಷತೆ 'ಸಿ' ಗ್ರೇಡ್ ನೀಡಲಾಗಿದ್ದು, ಕಥೆ ಹೇಳುವ ವಿಚಾರದಲ್ಲಿ ಮೋದಿಗೆ 'ಎ++' ಗ್ರೇಡ್ ಸಿಕ್ಕಿದೆ.

Scroll to load tweet…

ಇನ್ನು ಪಠ್ಯೇತರ(ಪಠ್ಯ ಪೂರಕ) ಚಟುವಟಿಯಲ್ಲಿ ಹಿಂಸೆ ಹಾಗೂ ಕೋಮು ಗಲಭೆಗೆ ಟಿಕ್ ಮಾರ್ಕ್ ಸಿಕ್ಕಿದೆ. ವೈವಾ(ಮೌಖಿಕ) ಪರೀಕ್ಷೆಗೆ ಗೈರಾಗಿದ್ದಾರೆ, ಒಟ್ಟಾರೆ ಮೋದಿ 'ಡಿ' ಗ್ರೇಡ್ ಗಳಿಸಿಕೊಂಡಿದ್ದಾರೆ ಎಂದು ಅಂಕಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.