ನಾವು ಕೆಲವೊಮ್ಮೆ ಒಪ್ಪುತ್ತೇವೆ ಮತ್ತೆ ಕೆಲವೊಮ್ಮೆ ಪ್ರಶ್ನಿಸುತ್ತೇವೆ. ಆದರೆ ನಾವು ಒಬ್ಬರನ್ನೊಬ್ಬರು ಗೌರವಿಸಲು ಕಲಿತ್ತಿರುವುದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಸಾಮಾನ್ಯ ಕುಟುಂಬದಿಂದ ಬಂದ ನನಗೆ ಭಾರತದ ರಾಷ್ಟ್ರಪತಿಯಾಗಿ ಅತೀ ದೊಡ್ಡ ಜವಾಬ್ದಾರಿಯನ್ನು ವಹಿಸಿರುವುದಕ್ಕೆ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.

ನವದೆಹಲಿ(ಜು.25): ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ನಿಜವಾದ ಶಕ್ತಿ ನಾವು ಐಕ್ಯತೆಯಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಮುನ್ನಡೆ ಸಾಧಿಸಿದ್ದೇವೆ' ಎಂದು ಭಾರತದ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.

Add Asianetnews Kannada as a Preferred SourcegooglePreferred

ಸಂಸತ್ ಭವನದ ಸೆಂಟ್ರಲ್ ಸಭಾಂಗಣದಲ್ಲಿ ಭಾರತದ 14ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿ ಮಾತನಾಡಿದರು. ನಮ್ಮದು ಶಾಂತಿಯುತ ರಾಷ್ಟ್ರ, ಇದೇ ರೀತಿಯ ಸೌಹಾರ್ದ ಮಾರ್ಗದಲ್ಲಿಯೇ ನಾವು ಏಕತೆಯನ್ನು ಸಾಧಿಸಬೇಕು. ನಾವು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತೇವೆ. ಜಗತ್ತಿಗೆ ಸಮರ್ಥ ಭಾರತವನ್ನು ತೋರಿಸುವ ಸುಸಮಯ ಇದಾಗಿದೆ' ಎಂದು ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ ಮಾತುಗಳನ್ನು ಕೋವಿಂದ್ ಪುನರುಚ್ಚರಿಸಿದರು.

ನಾವು ಕೆಲವೊಮ್ಮೆ ಒಪ್ಪುತ್ತೇವೆ ಮತ್ತೆ ಕೆಲವೊಮ್ಮೆ ಪ್ರಶ್ನಿಸುತ್ತೇವೆ. ಆದರೆ ನಾವು ಒಬ್ಬರನ್ನೊಬ್ಬರು ಗೌರವಿಸಲು ಕಲಿತ್ತಿರುವುದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಸಾಮಾನ್ಯ ಕುಟುಂಬದಿಂದ ಬಂದ ನನಗೆ ಭಾರತದ ರಾಷ್ಟ್ರಪತಿಯಾಗಿ ಅತೀ ದೊಡ್ಡ ಜವಾಬ್ದಾರಿಯನ್ನು ವಹಿಸಿರುವುದಕ್ಕೆ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.

ಬೃಹತ್ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು 125 ಕೋಟಿ ಭಾರತೀಯರನ್ನು ಪ್ರತಿನಿಧಿಸುವ ಸಲುವಾಗಿ ನಾನು ಇಲ್ಲಿ ನಿಂತಿದ್ದೇನೆ. ಮಾಜಿ ಅಧ್ಯಕ್ಷರಾದ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಪ್ರಣವ್ ಮುಖರ್ಜಿ'ವರೆಗೆ ಎಲ್ಲರೂ ಶ್ರೇಷ್ಠ ನಾಯಕರುಗಳಾಗಿದ್ದಾರೆ. ನಾನು ಆ ಶ್ರೇಷ್ಠರ ಹಾದಿಯಲ್ಲಿ ಮುನ್ನಡೆಯಲು ಬಯಸುತ್ತೇನೆ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

71 ವರ್ಷದ ಕೋವಿಂದ್ ಅವರಿಗೆ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಪ್ರಮಾಣ ವಚನ ಬೋಧಿಸಿದರು. ಉತ್ತರ ಪ್ರದೇಶದ ಮೊದಲ ರಾಷ್ಟ್ರಪತಿ ಇವರಾಗಿದ್ದು, ಕೆ.ಆರ್. ನಾರಾಯಣ್ ನಂತರ 2ನೇ ದಲಿತ ರಾಷ್ಟ್ರಪತಿಯಾಗಿದ್ದಾರೆ.