ಜನಪ್ರತಿನಿಧಿ ಕಾಯ್ದೆ ಪ್ರಕಾರ ಜಾತಿ ಆಧಾರದಲ್ಲಿ ಮತ ಕೇಳುವುದು ಕಾನೂನು ರೀತಿ ಅಪರಾಧ.
ಬೆಂಗಳೂರು(ಜ.02): ತೀರಾ ಹೇಸಿಗೆ ಆದ ಕಾರಣ ಸುಪ್ರೀಂ ಕೋಟ್೯ ಈ ರೀತಿ ತೀಪು೯ ನೀಡಿದೆ. ಸುಂಪ್ರೀಂಕೋರ್ಟ್ ಆದೇಶ ಸ್ವಾಗತಾಹ೯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಜಾತಿ ಧಮ೯ದ ಆಧಾರದಲ್ಲಿ ಮತ ಕೇಳಬಾರದು ಎಂದು ಸುಪ್ರೀಂಕೋರ್ಟ್ ತೀಪು೯ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನಪ್ರತಿನಿಧಿ ಕಾಯ್ದೆ ಪ್ರಕಾರ ಜಾತಿ ಆಧಾರದಲ್ಲಿ ಮತ ಕೇಳುವುದು ಕಾನೂನು ರೀತಿ ಅಪರಾಧ. ಸುಪ್ರೀಂಕೋರ್ಟ್ ಆದೇಶ ಸ್ವಾಗತಾಹ೯. ಜಾತಿ ಅನ್ನೋದು ಒಂದು ಅಫೀಮು. ಇದನ್ನ ಮನುಷ್ಯ ಸೇವನೆ ಮಾಡಿದಾಗ ಸಮತೋಲನ ಕಳೆದುಕೊಳ್ಳುತ್ತಾನೆ. ಜನಜಾಗೃತಿನೇ ಇದಕ್ಕೆ ಮದ್ದು. ವಂಚಕರೇ ಬೇರೆ ಬೇರೆ ವೇಷ ಧರಿಸಿ ಅಧಿಕಾರಕ್ಕೆ ಬತಾ೯ರೆ. ಯೋಗ್ಯರು ಬರೋದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
