ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ತಮ್ಮದೇ ಪಕ್ಷದ ಲೋಪಗಳ ಮಾತನಾಡುವ ಎದೆಗಾರಿಕೆಯನ್ನು ರಾಜಣ್ಣ ತೋರಿದ್ದಾರೆ.

ಬೆಂಗಳೂರು(ಸೆ.22): ಮಧುಗಿರಿಯ ತಿಮ್ಲಾಪುರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಕಾಂಗ್ರೆಸ್ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿ 'ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ಹೇಳಿಕೆ ನೀಡೋ ಮೂಲಕ ವಿವಾದಕ್ಕೆ ಒಳಗಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ರಾಜಣ್ಣ ಅವರ ಹೇಳಿಕೆಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ತಮ್ಮದೇ ಪಕ್ಷದ ಲೋಪಗಳ ಮಾತನಾಡುವ ಎದೆಗಾರಿಕೆಯನ್ನು ರಾಜಣ್ಣ ತೋರಿದ್ದಾರೆ. ಮುಕ್ತವಾಗಿ ಮಾತನಾಡುವ ಸಂಸ್ಕೃತಿ ಇರಲೇಬಾರದೇ. ರಾಜಣ್ಣ ಅವರ ಮಾತುಗಳನ್ನ ಪದಶಃ ವಿಶ್ಲೇಷಣೆ ಮಾಡದೇ ಅವರ ಮಾತಿನ ಹಿಂದಿನ ಅರ್ಥವನ್ನ ಮಾದ್ಯಮಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.