ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಸಚಿವ : ಸರ್ಕಾರಕ್ಕೆ ಆಗಲಿದೆಯಾ ಉರುಳು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Jul 2018, 11:31 AM IST
Ramesh Jarkiholi Tour With MLAs  Congress High Command Warn To Leaders
Highlights

ಕಾಂಗ್ರೆಸ್ ಸಚಿವರೋರ್ವರು ಬಿಜೆಪಿ ಹಾಗೂ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿ ಇದ್ದು, ಸಂಪುಟ ವಿಸ್ತರಣೆ ವೇಳೆ  ಸರ್ಕಾರಕ್ಕೆ ಇದು ಉರುಳಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. 

ನವದೆಹಲಿ :  ಸಚಿವ ರಮೇಶ್ ಜಾರಕಿಹೊಳಿ ಶಾಸಕರೊಂದಿಗೆ ಅಜ್ಮೀರ್ ದರ್ಗಾ ಪ್ರವಾಸಕ್ಕೆ ತೆರಳಿದ್ದಕ್ಕೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಸಚಿವರ ವಿರುದ್ಧ ಗರಂ ಆಗಿದೆ. 

ಶಾಸಕರ ತಂಡ ಕಟ್ಟಿಕೊಂಡು ಪ್ರವಾಸ ಹೋಗಿದ್ದು, ಸಚಿವ ರಾಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ರಾಹುಲ್ ಗಾಂಧಿ ಕೂಡ ಗರಂ ಆಗಿದ್ದಾರೆ. 

ರಮೇಶ್ ಜಾರಕಿಹೊಳಿ ಅವರು ಕೈಗೊಂಡಿರುವುದು ಪ್ರವಾಸವೋ ಅಥವಾ ಶಕ್ತಿ ಪ್ರದರ್ಶನವೋ ಎನ್ನುವ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ರಾಜ್ಯ ನಾಯಕರ ಬಳಿ ಈ ಬಗ್ಗೆ ಮಾಹಿತಿ ಕೇಳಿದ್ದಾರೆ. 

13 ಶಾಸಕರ ಜೊತೆ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಹೋಗಿರುವುದು ರಾಜ್ಯದಲ್ಲಿ ತಪ್ಪು ಸಂದೇಶ ರವಾನಿಸಲಿದೆ ಎಂದು  ರಾಹುಲ್ ಗಾಂಧಿ  ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"

ಇನ್ನು ರಮೇಶ್ ಜಾರಕಿಹೊಳಿ ಜೊತೆ ಬಿಜೆಪಿ ಸಂಪರ್ಕದಲ್ಲಿದ್ದು, ಬಿ.ಎಸ್.ವೈ ಜೊತೆಯೂ ಕೂಡ ಉತ್ತಮ ಸಂಬಂಧ ಹೊಂದಿದ್ದಾರೆ.  ಸಂಪುಟ ವಿಸ್ತರಣೆಯಲ್ಲಿ ಬದಲಾವಣೆ ಮಾಡಿದರೆ ರಮೇಶ್ ಜಾರಕಿಹೊಳಿ ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ರಮೇಶ್ ಜೊತೆ ಹೋಗಿರುವ ಶಾಸಕರನ್ನ ಹಿಡಿತಕ್ಕೆ ತೆಗೆದುಕೊಳ್ಳಲು ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ.

loader