ಬೆಳಗಾವಿ :  ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಬರೋಬ್ಬರಿ 25 ಸ್ಥಾನಗಳಲ್ಲಿ ಜಯಗಳಿಸಿದೆ. ಇದೇ ಬೆನ್ನಲ್ಲೇ ಕೈ ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದು ಪಕ್ಕಾ ಆಗಿದೆ. 

ಈ ಬಗ್ಗೆ ಬೆಳಗಾವಿಯಲ್ಲಿ ಬಿಜೆಪಿ ಸಂಸದ ಸುರೇಶ ಅಂಗಡಿ ಮಾಹಿತಿ ನೀಡಿದ್ದು, ರಮೇಶ್ ಬಿಜೆಪಿ ಬರುತ್ತಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಸಿಕ್ಕಿದೆ. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸುತ್ತೇನೆ.  ರಮೇಶ್ ನಿಷ್ಠಾವಂತ ಕಾರ್ಯರ್ತ ಎಂದು ಹೊಗಳಿದ್ದಾರೆ. 

ರಮೇಶ ಜಾರಕಿಹೊಳಿಯನ್ನು ನಿರ್ಲಕ್ಷ್ಯ ಮಾಡಿದ್ದು, ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಏನು ಮಾಡುತ್ತಾರೆ.  ಆದ್ದರಿಂದ ನಮ್ಮ ನಾಯಕರ ಮೇಲೆ ಇದೀಗ ಭರವಸೆ ಇಟ್ಟಿ ಬಿಜೆಪಿ ಬರುತ್ತಿದ್ದು, ಅವರ ಆಗಮನವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.  ಜಾರಕಿಹೊಳಿ ಜೊತೆಗೆ ಕೆಲ ಶಾಸಕರೂ ಕೂಡ ಬಿಜೆಪಿಗೆ ಸೇರುತ್ತಿದ್ದು,  ಜಿಲ್ಲೆಯ ಕೈ ಶಾಸಕರೆಲ್ಲರೂ ತೊರೆದು ಬರಲಿದ್ದಾರೆ.