ಬೆಂಗಳೂರು(ಸೆ.13): ಕಾವೇರಿ ಹೋರಾಟ ಬೆಂಗಳೂರಿನಲ್ಲಿ ಉಗ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಮೇಶ್ ಅರವಿಂದ್ ಪ್ರತಿಭಟನಾನಿತರರಿಗೆ ಕಿವಿ ಮಾತು ಹೇಳಿದ್ದಾರೆ.
ಕೋಪದಿಂದ ಮಹಾಯುದ್ಧಗಳೇ ನಡೆದಿದೆ. ಅದಕ್ಕೆ ಕೋಪ ಮಾಡಿಕೊಳ್ಳದೆ ಶಾಂತಿಯಿಂದ ಇರಿ, ಶಾಂತಿಯನ್ನ ಕಾಪಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ನಮ್ಮ ವಿವೇಕವನ್ನ ಬಲಿ ಕೊಡದೆ ಜವಬ್ದಾರಿಯಿಂದ ವರ್ತಿಸಿ, ಹಾಗೇ ಒಂದು ಅನ್ಯಾಯವನ್ನ ಸರಿ ಪಡಿಸೋಕ್ಕೆ ಹೋಗಿ ಮತ್ತೊಂದು ಅನ್ಯಾಯ ಸೃಷ್ಟಿ ಮಾಡೋದು ಬೇಡ ಅಂತಾ ಎಂದು ರಮೇಶ್ ಅರವಿಂದ್ ಮನವಿ ಮಾಡಿಕೊಂಡಿದ್ದಾರೆ.
